ಪಂಜ್ಶೀರ್ : ಅಫ್ಘಾನಿಸ್ಥಾನವನ್ನು ತನ್ನ ವಶಕ್ಕೆ ಪಡೆದ ತಾಲಿಬಾನ್ ಉಗ್ರರಿಗೆ ಪಂಜ್ಶೀರ್ ನ ಮೈತ್ರಿ ಪಡೆ ತಕ್ಕ ಪಾಠ ಕಲಿಸಿದ್ದು, ಬರೋಬ್ಬರಿ 41 ತಾಲಿಬಾನಿಗಳನ್ನು ಹತ್ಯೆ ಮಾಡಿದೆ.
ಪಂಜ್ಶೀರ್ ನ ಮೇಲೆ ದಾಳಿ ನಡೆಸಲು ಮುಂದಾದ ತಾಲಿಬಾನ್ ಉಗ್ರರ ಮೇಲೆ ಮೈತ್ರಿ ಪಡೆ ಪ್ರತ್ಯುತ್ತರ ನೀಡಿದ್ದು, 41 ಉಗ್ರರನ್ನಯ ಹತ್ಯೆ ಮಾಡಿ, 20 ತಾಲಿಬಾನ್ ಉಗ್ರರನ್ನು ಸೆರೆ ಹಿಡಿದಿದೆ ಎಂದ ವರದಿ ತಿಳಿಸಿದೆ. ಈ ವೇಳೆ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ ಪಂಜ್ಶೀರ್ ನ ಮೈತ್ರಿ ಪಡೆಯ ಕಮಾಂಡರ್ ಹಸೀಬ್, ನಿಮಗೆ ಪಂಜ್ಶೀರ್ ಒಳ ಬರಲು ಬಿಡುತ್ತೇವೆ ಆದರೆ ಹೊರ ಹೋಗಲು ಬಿಡುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ.
ಅಮೆರಿಕ ಸೇನೆ ಆ.31ರಂದು ತಾಲಿಬಾನ್ ಆಕ್ರಮಿತ ಅಫ್ಘಾನ್ ನಿಂದ ಹೊರಬಂದ ಬಳಿಕ ತಾಲಿಬಾನ್ ನಾಯಕರು ಸಭೆ ನಡೆಸುತ್ತಿದ್ದಾರೆ. ಈ ವೇಳೆ ಹೊಸ ಸರ್ಕಾರ ರಚನೆ, ಭದ್ರತೆ ಕುರಿತು ಚರ್ಚೆ ನಡೆಸಲಾಗಿದೆ.