ಅಂಬಾಲಾ: ರಫೇಲ್ ಯುದ್ಧವಿಮಾನವು ಇಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು.
ಅಂಬಲಾದಲ್ಲಿರುವ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ ಪೂಜೆ ಪೂರ್ಣಗೊಳಿಸಿದ ಬಳಿಕ ರಫೇಲ್ ನ್ನು ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು.
ಯುದ್ಧ ವಿಮಾನ ಖರೀದಿಯಿಂದ ಭಾರತ ಹಾಗೂ ಫ್ರಾನ್ಸ್ ನ ಸಂಬಂಧವು ಇನ್ನಷ್ಟು ಗಟ್ಟಿಯಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.