News Karnataka Kannada
Friday, May 03 2024
ವಿದೇಶ

ಮತ್ತೊಂದು ಸೋಂಕಿನ ಆತಂಕ: ಫ್ರಾನ್ಸ್‌ನಲ್ಲಿ ಹೊಸ ರೂಪಾಂತರಿ ‘IHU’ ಪತ್ತೆ!

Virus
Photo Credit :

ಈಗಾಗಲೇ ವಿಶ್ವದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ತಲ್ಲಣ ಸೃಷ್ಟಿಸುತ್ತಿದ್ದು, ಇದರ ಬೆನ್ನಲ್ಲೇ ಇದೀಗ ವಿಜ್ಞಾನಿಗಳು ದಕ್ಷಿಣ ಫ್ರಾನ್ಸ್‌ನಲ್ಲಿಕೊರೋನಾದ ಹೊಸ ತಳಿಯನ್ನು ಪತ್ತೆ ಹಚ್ಚಿದ್ದಾರೆ.

ಈ B.1.640.2 ಎಂಬ ಈ ರೂಪಾಂತರಕ್ಕೆ ‘IHU’ ಎಂದು ಕರೆಯಲಾಗಿದೆ. ಇದನ್ನು ಫ್ರಾನ್ಸ್‌ನ IHU ಮೆಡಿಟರೇನ್ ಸೋಂಕು ತಜ್ಞರು ಪತ್ತೆ ಹಚ್ಚಿದ್ದಾರೆ. ಇದು ಬರೋಬ್ಬರಿ 46 ಉಪ ರೂಪಾಂತರಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸದ್ಯ ಇದೀಗ 12 ಮಂದಿಯಲ್ಲಿ ಈ ಪ್ರಕರಣ ವರದಿಯಾಗಿದೆ.

ಆಫ್ರಿಕಾದ ಕ್ಯಾಮರೂನ್‌ಗೆ ಸಂಚಾರ ಬೆಳೆಸಿದ್ದವರಲ್ಲಿ ಈ ವೈರಸ್ ಕಂಡು ಬಂದಿದ್ದು, ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.
ಸದ್ಯ B.1.640.2 ಇಲ್ಲಿಯವರೆಗೆ ಇತರ ದೇಶಗಳಲ್ಲಿ ಗುರುತಿಸಲಾಗಿಲ್ಲ.

ಹಾಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತನಿಖೆಯ ಅಡಿಯಲ್ಲಿ ಈ ರೂಪಾಂತರವನ್ನು ಲೇಬಲ್ ಮಾಡಲಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಅವರು ಟ್ವಿಟರ್​ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು