News Karnataka Kannada
Monday, May 06 2024
ವಿದೇಶ

ಬ್ಯಾಂಕ್‌ ಖಾತೆಗೇ ನಕಲಿ ಹಣ ತುಂಬಲು ಯತ್ನ ; ಮಹಿಳೆ ಬಂಧನ

Photo Credit :

 ಬ್ಯಾಂಕ್‌ ಖಾತೆಗೇ ನಕಲಿ ಹಣ ತುಂಬಲು ಯತ್ನ ; ಮಹಿಳೆ ಬಂಧನ

ಸೋನಾಮುರ ; ತ್ರಿಪುರಾ ರಾಜ್ಯದ ಸೋನಾಮುರ ಶಾಖೆಯಲ್ಲಿರುವ ತನ್ನ ಸ್ಟೇಟ್ ಬ್ಯಾಂಕ್ ಖಾತೆಗೆ ನಕಲಿ ಹಣ ಜಮಾ ಮಾಡಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.ತ್ರಿಪುರಾದ ಸೆಪಾಹಿಜಲಾ ಜಿಲ್ಲೆಯ ಸೋನಮುರಾ ಪ್ರದೇಶದ ಆಶಾ ಖತುನ್ ಬಂಧಿತ ಆರೋಪಿ. ಈಕೆ ಸೋನಮುರದ ರವೀಂದ್ರ ನಗರದಲ್ಲಿರುವ ತನ್ನ ಎಸ್‌ಬಿಐ ಬ್ಯಾಂಕ್ ಖಾತೆಗೆ ಶುಕ್ರವಾರ 2 ಲಕ್ಷದ 45 ಸಾವಿರ ರೂ. ಜಮಾ ಮಾಡಲು ಬಂದಿದ್ದಳು.

ಆ ಹಣವನ್ನು ಬ್ಯಾಂಕ್​ ಕ್ಯಾಷಿಯರ್ ಪರಿಶೀಲಿಸಿದಾಗ 500 ಮತ್ತು 100 ರೂ. ಮುಖಬೆಲೆಯ ನಕಲಿ ನಕಲಿ ನೋಟುಗಳು ಪತ್ತೆಯಾಗಿವೆ. ಕ್ಯಾಷಿಯರ್​ ಕೂಡಲೇ ಈ ಮಾಹಿತಿಯನ್ನು ಸೇವಾ ವ್ಯವಸ್ಥಾಪಕ ಅಮಿತಾಭ ರಾಯ್​ಗೆ ತಿಳಿಸಿದರು. ನಂತರ ಅವರು ಶಾಖಾ ವ್ಯವಸ್ಥಾಪಕ ಕುಂದನ್ ಸುಭಾಗೆ ಮಾಹಿತಿ ನೀಡಿದರು.ಪೊಲೀಸರಿಗೆ ಈ ಬಗ್ಗೆ ಲಿಖಿತ ದೂರು ನೀಡಲಾಗಿದ್ದು, ಪೊಲೀಸರು ಆಶಾ ಖತುನ್ಅನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ವೇಳೆ ಮಹಿಳೆ ನೆರೆ ಗ್ರಾಮವಾದ ಶ್ರೀಮಂತಾಪುರದ ಜಾಯ್ನಾಲ್ ಮಿಯಾ ಅವರಿಂದ ಹಣ ಪಡೆದಿರುವುದಾಗಿ ತಿಳಿಸಿದ್ದು, ಕೋರ್ಟ್ ಏಪ್ರಿಲ್ 16ಕ್ಕೆ ವಿಚಾರಣೆ ಮುಂದೂಡಿದೆ. ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು