ನವದೆಹಲಿ: ಪಾಕ್ ನ ಜೈಷೆ ಎ ಮೊಹಮ್ಮದ್ ಉಗ್ರ ಅಡಗು ತಾಣಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಬಳಿಕ ಉಪಗ್ರಹದಲ್ಲಿ ಸೆರೆಯಾದ ಚಿತ್ರವೊಂದು ಇದೀಗ ಸುದ್ದಿಗೆ ಗ್ರಾಸವಾಗಿದೆ.
ಈ ಚಿತ್ರವನ್ನು ನೋಡಿದ ಕೆಲವರು ಪ್ರತಿಕ್ರಿಯಿಸಿ ಜೈಷೆ ಎ ಮೊಹಮ್ಮದ್ ಉಗ್ರ ಸಂಘಟನೆ ಕ್ಯಾಂಪ್ ಮೇಲೆ ಭಾರತ ವಾಯುಪಡೆ ದಾಳಿ 1000 ಕೆಜಿಯ ಬಾಂಬ್ ದಾಳಿ ನಡೆಸಿದ್ದರೂ ಉಗ್ರರ ಕ್ಯಾಂಪ್ ನ ಕಟ್ಟದ ಹಾಗೆಯೇ ಇದೆ.
ಇನ್ನೂ ಕೆಲವರು ಇದು ಬಾಂಬ್ ದಾಳಿ ನಡೆಸುವ ಮುನ್ನಾ ತೆಗೆದ ಚಿತ್ರ ಎಂದು ಹೇಳುತ್ತಿದ್ದಾರೆ. ಫೋಟೋವನ್ನು ಫೆ. 26ರಂದು ಸಾನ್ ಪ್ರಾನ್ಸಿಸ್ಕೋ ಇದರ ಅರ್ಥ್ ಇಮೇಜ್ ಕಂಪೆನಿ ಫ್ಲಾನೇಟ್ ಲ್ಯಾಬ್ಸ್ ಈ ಫೋಟೋವನ್ನು ತೆಗೆದಿದ್ದು ಇದನ್ನು ನ್ಯೂಸ್ ಏಜೆನ್ಸಿ ರಾಯಿಟರ್ಸ್ ಗೆ ಕಳುಹಿಸಿಕೊಟ್ಟಿತ್ತು. ಈ ಚಿತ್ರ ಬಿಡುಗಡೆ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದ್ದು ಇದೀಗ ಚಿತ್ರ ಕುರಿತು ಪ್ರಶ್ನೆಗಳು ಹುಟ್ಟಿಕೊಂಡಿದೆ.