ನವದೆಹಲಿ : ಈ ಹಿಂದೆ ನಿರೀಕ್ಷಿಸಿದಂತೆ ವಿಧಾನಸಭೆ ಚುನಾವಣೆಯ ಬಳಿಕ ತೈಲ ಸಂಸ್ಥೆಗಳು ತೈಲ ಉತ್ಪನ್ನಗಳ ದರ ಹೆಚ್ಚಳ ಪ್ರಕ್ರಿಯೆ ಗೆ ಮತ್ತೆ ಚಾಲನೆ ನೀಡಿವೆ .
ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳವಾಗಿದ್ದು, ಪೆಟ್ರೋಲ್ ದರ ಲೀಟರ್ ಗೆ 19 ಪೈಸೆ ಹೆಚ್ಚಳವಾಗಿದೆ . ಡೀಸೆಲ್ ದರ ಪ್ರತಿ ಲೀಟರ್ ಗೆ 21 ಪೈಸೆ ಹೆಚ್ಚಳ ಮಾಡಲಾಗಿದೆ .
ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 90.74 ರೂಪಾಯಿ ಆಗಿದೆ . ಡೀಸೆಲ್ ದರ ಲೀಟರ್ ಗೆ 81.12 ರೂಪಾಯಿ ಆಗಿದೆ . ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ದರ ರಾಜ್ಯದಿಂದ ರಾಜ್ಯಕ್ಕೆ ಕೆಲವು ಪೈಸೆ ವ್ಯತ್ಯಾಸವಾಗುತ್ತಿದೆ .