ನೈಜಿರಿಯಾದ ಸಮೀಪ ಇರುವ ದಕ್ಷಿಣ ನೈಜರ್ನಲ್ಲಿ ಚಿನ್ನದ ಗಣಿ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಗಣಿ ಕುಸಿಯುವ ವೇಳೆ ಕೆಲಸ ಮಾಡುತ್ತಿದ್ದರು
. 18 ಮಂದಿ ಜೀವಂತ ಸಮಾಧಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗರೀನ್ ಲಿಮಾನ್ ಗಣಿಯಲ್ಲಿ ಈ ಘಟನೆ ನಡೆದಿದೆ.
ಕಾರ್ಮಿಕರು ಬಾವಿಯೊಳಗೆ ಅಗಿಯುತ್ತಿದ್ದ ವೇಳೆ ಅದರ ಗೋಡೆಗಳು ಕುಸಿದಿವೆ. ಮೂರು ಮೃತದೇಹಗಳು ಗುಂಡಿಯಲ್ಲಿಯೇ ಇರುವ ಸಾಧ್ಯತೆ ಇದೆ. ಇತ್ತೀಚೆಗೆ ಈ ಗಣಿಯನ್ನು ಕಂಡುಹಿಡಿಯಲಾಗಿತ್ತು. ಆದರೆ ಸಾಕಷ್ಟು ಮಂದಿ ಈಗಾಗಲೇ ಇಲ್ಲಿ ಕೆಲಸ ಮಾಡುತ್ತಿದ್ದರು.
Breaking news: Reports that at least 20 people have died in a goldmine incident in Niger, leaving dozens of them trapped pic.twitter.com/MNZf4MLbSp
— Kelvin Ashong (@Mawunya_) November 8, 2021