News Karnataka Kannada
Wednesday, May 01 2024
ವಿದೇಶ

ನೇಪಾಳದಲ್ಲಿ 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆ!

Dubai-Mangaluru flight passengers shocked to hear ticket prices
Photo Credit :

ನೇಪಾಳ: ಮೂರು ಮಂದಿ ಸಿಬ್ಬಂದಿಗಳು ಮತ್ತು ನಾಲ್ಕು ಮಂದಿ ಭಾರತೀಯರನ್ನು ಒಳಗೊಂಡಂತೆ 22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟ್ವಿನ್‌ ಎಂಜಿನ್‌ ವಿಮಾನವೊಂದು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.

ನೇಪಾಳದ ಮಸ್ತಾಂಗ್‌ ಜಿಲ್ಲೆಯ ಪರ್ವತ ಪ್ರದೇಶಗಳಲ್ಲಿ ವಿಮಾನ ನಾಪತ್ತೆಯಾಗಿರುವ ಕುರಿತು ಅಧಿಕಾರಿಗಳು ದೃಢಪಡಿಸಿದ್ದಾರೆ ಎನ್ನಲಾಗಿದೆ. ತಾರಾ ಏರ್ಸ್‌ ಗೆ ಸೇರಿದ ವಿಮಾನವು ಭಾನುವಾರ ಬೆಳಿಗ್ಗೆ 9:55ಕ್ಕೆ ಪೋಖರಾದಿಂದ ಜೋಮ್ಸಮ್‌ಗೆ ಹಾರಾಟವಾಗುತ್ತಿತ್ತು. ಮಸ್ತಾಂಗ್‌ ನ ಲೆಟೆ ಪ್ರದೇಶವನ್ನು ತಲುಪಿದ ನಂತರ ವಿಮಾನವು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಜೋಮ್ಸಮ್‌ ಗೆ ಹೋಗಬೇಕಿದ್ದ ವಿಮಾನವು ಧವಳಗಿರಿ ಪರ್ವತಗಳ ಕಡೆ ತಿರುಗಿದೆ ಎಂದು ನೇಪಾಳಿ ಮಾಧ್ಯಮಗಳು ಹೇಳಿವೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನವು ಮುಸ್ತಾಂಗ್ ಜಿಲ್ಲೆಯ ಲೆಟೆಯ “ಟಿಟಿ” ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಶಂಕಿಸಲಾಗಿದೆ.  ವಿಮಾನ ಅಪಘಾತದಂತ ಕೆಲವು ಅಸಾಮಾನ್ಯ ಸದ್ದು ಕೇಳಿರುವ ಕುರಿತು ಸ್ಥಳಿಯರು ಮಾಹಿತಿ ನೀಡಿದ್ದು ಶೋಧ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ನೇಪಾಳಿ ಪೋಲೀಸರು ಹೇಳಿದ್ದಾರೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನೇಪಾಳದ ಗೃಹ ಸಚಿವಾಲಯವು ನಾಪತ್ತೆಯಾದ ವಿಮಾನದ ಹುಡುಕಾಟಕ್ಕಾಗಿ ಮುಸ್ತಾಂಗ್ ಮತ್ತು ಪೋಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ನೇಪಾಳ ಸೇನೆಯ ಹೆಲಿಕಾಪ್ಟರ್ ಕೂಡ ಹುಡುಕಾಟಕ್ಕೆ ನಿಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು