News Karnataka Kannada
Sunday, May 12 2024
ವಿದೇಶ

ನೀರು ಮಿಶ್ರಿತ ಹಾಲು – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

Photo Credit :

ನೀರು ಮಿಶ್ರಿತ ಹಾಲು  - ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

ಮಂಡ್ಯ: ಮನ್‍ಮುಲ್‍ಗೆ ಪೂರೈಕೆ ಆಗುತ್ತಿದ್ದ ನೀರು ಮಿಶ್ರಿತ ಹಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‍ಮುಲ್‍ನ ಎಂಡಿಯನ್ನು ವರ್ಗಾವಣೆ ಮಾಡಿ ಏಳು ಮಂದಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಮಂಡ್ಯದ ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲನ್ನು ಹಲವು ತಿಂಗಳಿನಿಂದ ಸರಬರಾಜು ಆಗುತ್ತಿತ್ತು. ಈ ಬಗ್ಗೆ ಮನ್‍ಮುಲ್‍ನ ಅಧ್ಯಕ್ಷರು ಹಾಗೂ ನಿರ್ದೇಶಕರು ಹಲವು ದಿನಳ ತನಿಖೆ ಬಳಿಕ ಈ ಜಾಲವನ್ನು ಭೇದಿಸಿ ಪೊಲೀಸರಿಗೂ ದೂರು ನೀಡಿದ್ದರು. ಈ ನಡುವೆ ಕೆಎಂಎಫ್ ಅಧಿಕಾರಿಗಳು ಸಹ ತನಿಖೆ ನಡೆಸುತ್ತಿದ್ದರು.
ಮನ್‍ಮುಲ್‍ನಲ್ಲಿ ನಡೆದಿರುವ ಈ ಹಗರಣಕ್ಕೆ ಅಧಿಕಾರಿಗಳೇ ಕಾರಣ ಎಂದು ಕೆಎಂಎಫ್ ವರದಿ ನೀಡಿ, ಏಳು ಮಂದಿಯನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ ಮನ್‍ಮುಲ್‍ನ ಮದ್ದೂರಿನ ಉಪಕಚೇರಿ ವ್ಯವಸ್ಥಾಪಕ ಮರಿರಾಚಯ್ಯ, ಭರತ್‍ರಾಜ್, ರಾಮಕೃಷ್ಣಯ್ಯ, ವಿಸ್ತಾರಣಾಧಿಕಾರಿಗಳಾದ ಮಧುಕುಮಾರ್, ರಮೇಶ್, ಟ್ರಾನ್ಸ್ ಪೋರ್ಟ್ ವಿಭಾಗದ ಡಾ.ವೆಂಕಟೇಶ್ ಅವರುಗಳನ್ನು ಅಮಾನತು ಮಾಡಲಾಗಿದೆ.
ಮನ್‍ಮುಲ್‍ನ ಎಂಡಿಯನ್ನು ಸಹ ವರ್ಗಾವಣೆ ಮಾಡಿ ಮೈಸೂರಿನ ಮೈಮುಲ್‍ನ ಎಂಡಿ ಆಗಿದ್ದ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು