News Karnataka Kannada
Monday, April 29 2024
ವಿದೇಶ

ತಾಲಿಬಾನಿಗಳ ಉಪಟಳ ಮಟ್ಟ ಹಾಕಲು ಅಫ್ಗಾನಿಸ್ಥಾನ ರಾಜಕೀಯ ಇಚ್ಚಾ ಶಕ್ತಿ ಪ್ರದರ್ಶಿಸಲಿ ಎಂದ ಅಮೇರಿಕ

Taliban
Photo Credit :

ವಾಷಿಂಗ್ಟನ್, – ತಾಲಿಬಾನ್‍ಗಳ ಉಪಟಳ ಮಟ್ಟ ಹಾಕಲು ಆಫ್ಘಾನಿಸ್ತಾನದ ಸರ್ಕಾರವೇ ರಾಜಕೀಯ ಇಚ್ಚಾಶಕ್ತಿ ಪ್ರದರ್ಶನ ಮಾಡಬೇಕು ಎಂದು ಅಮೆರಿಕಾ ಹೇಳಿದೆ.ದಿನ ನಿತ್ಯದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ಪತ್ರಿಕಾ ಕಾರ್ಯದರ್ಶಿ ಜೆನ್ ಪಕ್ಸಿ ಅವರು, ಆಫ್ಘಾನಿಸ್ಥಾನದ ರಾಷ್ಟ್ರೀಯ ಭದ್ರತೆ ಪಡೆಗಳು ಸಂಪೂರ್ಣ ಶಸ್ತ್ರಸಜ್ಜಿತವಾಗಿವೆ.
ತಾಲಿಬಾನಿಗಳ ವಿರುದ್ಧ ಹೋರಾಟ ನಡೆಸಲು ಅಲ್ಲಿನ ರಕ್ಷಣಾ ಪಡೆಗಳಿಗೆ ಎರಡು ದಶಕಗಳಿಂದ ತರಬೇತಿಯನ್ನು ನೀಡಲಾಗಿದೆ. ಆಫ್ಘಾನಿಸ್ಥಾನದವರಿಗೆ ತಮಗೆ ಏನು ಬೇಕೋ ಅದನ್ನು ಪಡೆಯಲು ಅವಕಾಶ ಇದೆ. ಆದರೆ ಅದಕ್ಕಾಗಿ ಅವರು ರಾಜಕೀಯ ಇಚ್ಚಾಶಕ್ತಿಯನ್ನು ಪ್ರದರ್ಶನ ಮಾಡಬೇಕು. ಈ ಸಂದರ್ಭದಲ್ಲಿ ರಾಜಕೀಯ ನಾಯಕರು ಮೈಕೊಡವಿ ಎದ್ದು ನಿಲ್ಲಬೇಕು ಎಂದು ಹೇಳಿದ್ದಾರೆ. ಅಮೆರಿಕಾ ಅಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಸ್ತುತ ರಕ್ಷಣೆಯ ಸ್ಥಿತಿಗತಿಯನ್ನು ನೋಡಿದರೆ ಪರಿಸ್ಥಿತಿ ಅನಿವಾರ್ಯಕ್ಕೆ ತಿರುಗಿದೆ ಎಂದು ಹೇಳಿದ್ದಾರೆ.ಆಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿದ್ದ ರಕ್ಷಣಾ ಪಡೆಗಳನ್ನು ಹಿಂಪಡೆಯಲಾಗಿದೆ ಎಂದಾಕ್ಷಣ ನಾವು ಅಲ್ಲಿನ ಬೆಳವಣಿಗೆಗಳ ಕುರಿತು ಕಾಳಜಿ ವಹಿಸುವುದಿಲ್ಲ ಎಂದು ಅರ್ಥವಲ್ಲ.
ಆಫ್ಘನ್ ಪ್ರಜೆಗಳ ಸುರಕ್ಷತೆ ಮತ್ತು ಸ್ಥಿರತೆಗೆ ಅಮೆರಿಕಾ ಬದ್ಧವಾಗಿದೆ. ಅಲ್ಲಿನ ಸರ್ಕಾರ ಬಯಸಿದರೆ ಜಂಟಿಯಾಗಿ ವಾಯು ಮಾರ್ಗದಲ್ಲಿನ ದಾಳಿಗಳನ್ನು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ. ಆಫ್ಘಾನಿಸ್ತಾನದಲ್ಲಿ ದಿನೇ ದಿನೇ ತಾಲಿಬಾನಿಗಳ ಆರ್ಭಟ ಹೆಚ್ಚಾಗುತ್ತಿದ್ದು, ಶೇ.60ರಷ್ಟು ದೇಶವನ್ನು ಆಕ್ರಮಿಸಿದ್ದಾರೆ. ಅಮೆರಿಕಾ ತನ್ನ ಸೇನೆಯನ್ನು ಹಿಂಪಡೆಯಲು ಆರಂಭಿಸಿದ ಬಳಿಕವಂತೂ ಉಗ್ರರ ಉಪಟಳ ತೀವ್ರ ಹೆಚ್ಚಾಗುತ್ತಿದೆ. ಅಸ್ಥಿರತೆ, ಆಕ್ರಮಣಗಳಿಂದ ಸ್ಥಳೀಯರು ನರಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು