ಹೊಸದಿಲ್ಲಿ: ಅಮೆರಿಕ ಪರ ಕ್ರಿಕೆಟ್ ಆಡುವ ಸಲುವಾಗಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ 19 ವರ್ಷದೊಳಗಿನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಉನ್ಮುಕ್ತ್ ಚಾಂದ್
ಮುಲತಃ ದಿಲ್ಲಿಯವರಾದ ಯುವ ಬಲಗೈ ಬ್ಯಾಟ್ಸ್ಮನ್ ನಿವೃತ್ತಿ ಘೋಷಿಸಿ ಅಮೆರಿಕ ಪರ ಆಡಲು ಮುಂದಾಗುತ್ತಿರುವ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶುಕ್ರವಾರ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
2019ರಲ್ಲಿ ನಡೆದ ಐಸಿಸಿ ಕಿರಿಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಉನ್ಮುಕ್ತ್ ಚಾಂದ್ ಟ್ರೋಫಿ ಗೆದ್ದುಕೊಟ್ಟು ಭಾರಿ ಸುದ್ದಿ ಮಾಡಿದ್ದರು. ವಿರಾಟ್ ಕೊಹ್ಲಿ ಅವರಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚಾಂದ್ ಕೂಡ ಅಬ್ಬರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಬಳಿಕ ಅವರ ಅಸ್ಥಿರ ಪ್ರದರ್ಶನಗಳ ಸೆಲೆಕ್ಟರ್ಸ್ನ ಅವಕೃಪೆ ಎದುರಿಸಿದರು. ಇದೀಗ ಹೊಸ ಅವಕಾಶಗಳನ್ನು ಹುಡುಕುತ್ತಾ ಅಮೆರಿಕ ಪರ ಆಡುವ ನಿರ್ಧಾರ ಮಾಡಿದ್ದಾರೆ.