ರಷ್ಯಾ : ತಜಿಕಿಸ್ತಾನಕ್ಕೆ ರಷ್ಯಾ ತನ್ನ 12 ಶಸ್ತ್ರಸಜ್ಜಿತ ವಾಹನಗಳು ಹಾಗೂ ಸೇನಾ ಉಪಕರಣಗಳನ್ನು ಕಳುಹಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ತಜಿಕಿಸ್ತಾನದಲ್ಲಿರುವ ತನ್ನ ವಾಯುನೆಲೆಯಲ್ಲಿ ರಷ್ಯಾ ಸೇನಾ ಕಸರತ್ತು ನಡೆಸುತ್ತಿದ್ದು, ಮಿಲಿಟರಿ ನೆಲೆಯಲ್ಲಿ ಹಾರ್ಡ್ ವೇರ್ ಅನ್ನು ವಿಸ್ತರಿಸಿದೆ.
ಅಫ್ಘಾನಿಸ್ಥಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಧ್ಯ ಏಷ್ಯಾವನ್ನು ಇಸ್ಲಾಮಿಕ್ ಉಗ್ರರು ಒಳನುಸುಳುವ ಬಗ್ಗೆ ರಷ್ಯಾ ಆತಂಕ ವ್ಯಕ್ತಪಡಿಸಿದೆ. ತಜಿಕಿಸ್ತಾನದ ಗಡಿಯಲ್ಲಿ ಉಂಟಾಗಿರುವ ಅಸ್ಥಿರತೆಯ ಹಿನ್ನೆಲೆ ನಮ್ಮ ಭದ್ರತೆ ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದೆ.