ದೇಶದ ಅತಿದೊಡ್ಡ ಸಾಗಾಣಿಕೆಗಳಲ್ಲಿ ಒಂದಾದ ಅದಾನಿ ಬಂದರು, ಮುಂದಿನ ತಿಂಗಳಿನಿಂದ ಇರಾನ್, ಪಾಕ್ ಮತ್ತು ಅಫ್ಘಾನ್ ರಾಷ್ಟ್ರಗಳ ಯಾವುದೇ ಕಂಟೇನರ್ ಸರಕುಗಳನ್ನು ಸಾಗಿಸುವುದಿಲ್ಲ ಎಂದು ಘೋಷಿಸಿದೆ.
ಗುಜರಾತಿನ ಕಚ್ ಪ್ರದೇಶದ ಮುಂಡ್ರಾ ಬಂದರಿನಲ್ಲಿ ಕಳೆದ ತಿಂಗಳು ಬರೋಬ್ಬರಿ 3 ಸಾವಿರ ಕೆ.ಜಿ. ಹೆಯಾಯಿನ್ ಡ್ರಗ್ ಗಳು ಪತ್ತೆಯಾಗಿದ್ದು, ಈ ಹಿನ್ನೆಲೆ ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರತ್ ತ್ರಿಪಾಠಿ, ಅದಾನಿ ಬಂದರಿಗೆ ಸಂಬಂಧಿಸಿದ ಕಾರ್ಗೋ ಶಿಪ್ ಗಳು ನ. 15ರಿಂದ ಇರಾನ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ ಯಾವುದೇ ಕಂಟೇನರ್ ಗಳನ್ನು ಸಾಗಿಸುವುದಿಲ್ಲ. ಈ ನಿಯಮ ಅದಾನಿ ವಲಯಕ್ಕೆ ಸೇರಿದ ಎಲ್ಲಾ ಟರ್ಮಿನಲ್ ಗಳಿಗೂ ಅನ್ವಯವಾಗಲಿದೆ ಎಂದರು.