ಬಾಗ್ದಾದ್: ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ವಾರ್ಡ್ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 50ಕ್ಕೂ ಹೆಚ್ಚು ಮಂದಿ ಬೆಂಕಿಗೆ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ಇರಾಕ್ನ ನಾಸಿರ್ಯಾ ನಗರದ ಅಲ್-ಹುಸೈನ್ ಟೀಚಿಂಗ್ ಹಾಸ್ಪಿಟಲ್ನಲ್ಲಿ ಸೋಮವಾರ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ವಾರ್ಡ್ನಲ್ಲಿ 70 ಕೋವಿಡ್ ಸೋಂಕಿತರರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗ್ನಿ ಅವಘಡ ಸಂಭವಿಸಿದಾಗ ಕನಿಷ್ಠ 63 ರೋಗಿಗಳು ಇದ್ದರು ಎಂದು ಇರಾಕ್ನ ನಾಗರಿಕ ರಕ್ಷಣಾ ವಿಭಾಗದ ಮುಖ್ಯಸ್ಥ ಮೇಜರ್ ಜೆನರಲ್ ಖಾಲಿದ್ ಬೊಹನ್ ತಿಳಿಸಿದ್ದಾರೆ.
ಇರಾಕ್ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ ಸಂಭವಿಸಿ ಎರಡನೇ ದೊಡ್ಡ ಪ್ರಮಾಣದ ಅಗ್ನಿ ಅನಾಹುತ ಇದಾಗಿದೆ. ಬಾಗ್ದಾದ್ನ್ ಇಬನ್ ಅಲ್ ಖತೀಬ್ ಆಸ್ಪತ್ರೆಯಲ್ಲಿ ಏಪ್ರಿಲ್ನಲ್ಲಿ ಅಗ್ನಿ ದುರಂತ ಸಂಭವಿಸಿ ಕನಿಷ್ಠ 82 ಮಂದಿ ಮೃತಪಟ್ಟಿದ್ದರು.