News Karnataka Kannada
Tuesday, May 07 2024
ವಿದೇಶ

ಟ್ವಿಟರ್ ಖರೀದಿಗೆ ಒಲವು ತೋರಿದ ಜಗತ್ತಿನ ಅತಿ ಸಿರಿವಂತ ಎಲಾನ್ ಮಸ್ಕ್!

Watch first World Cup match on Twitter: Musk
Photo Credit :

ಜಗತ್ತಿನ ಅತಿ ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಖರೀದಿಸಲು ಒಲವು ತೋರಿದ್ದು, 41 ಬಿಲಿಯನ್‌ ಡಾಲರ್‌ (ಸುಮಾರು 3.12 ಲಕ್ಷ ಕೋಟಿ ರೂಪಾಯಿ) ನೀಡಿ ಕಂಪನಿ ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ನ ಆಡಳಿತ ಮಂಡಳಿಗೆ ಸೇರಲು ಎಲಾನ್‌ ಇತ್ತೀಚೆಗಷ್ಟೇ ನಿರಾಕರಿಸಿದ್ದರು.

ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್‌ (₹4,124.81) ಕೊಡುವುದಾಗಿ ಎಲಾನ್‌ ಮಸ್ಕ್‌ ಷೇರುಪೇಟೆ ನಿಯಂತ್ರಣ ಮಂಡಳಿಗೆ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

‘ಮುಕ್ತ ಅಭಿವ್ಯಕ್ತಿಗೆ ಜಗತ್ತಿನ ಎಲ್ಲೆಡೆ ವೇದಿಕೆಯಾಗಬಲ್ಲ ಶಕ್ತಿ ಟ್ವಿಟರ್‌ಗೆ ಇದೆ ಎಂಬ ನಂಬಿಕೆಯಿಂದ ನಾನು ಟ್ವಿಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಆದರೆ, ಟ್ವಿಟರ್ ಕಂಪನಿಯು ಈಗಿನ ಸ್ವರೂಪದಲ್ಲಿ ಈ ಉದ್ದೇಶವನ್ನು ಈಡೇರಿಸುವುದಿಲ್ಲ, ಬೆಳೆಯುವುದೂ ಇಲ್ಲ ಎಂಬುದು ನನಗೆ ಅರಿವಾಗಿದೆ.

ಟ್ವಿಟರ್‌ಅನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಬೇಕು’ ಎಂದು ಎಲಾನ್‌ ಅವರು ಟ್ವಿಟರ್‌ ಅಧ್ಯಕ್ಷ ಬ್ರೆಟ್‌ ಟೇಲರ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು