ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಶೌರ್ಯ, ಧೈರ್ಯದಿಂದ ಗಿನ್ನಿಸ್ ದಾಖಲೆ ಮಾಡುತ್ತೆ. ಆದರೆ ಈ ನಾಯಿ ತನ್ನ ಕಿವಿಯ ಅಳತೆಯಿಂದ ದಾಖಲೆ ಬರೆದಿದೆ. ಬರೋಬ್ಬರಿ 12.38 ಇಂಚು ಉದ್ದದ ಕಿವಿ ಹೊಂದಿರುವ ಅಮೆರಿಕದ ‘ಲೌ’ ಹೆಸರು ಈಗ ಗಿನ್ನಿಸ್ ದಾಖಲೆ ಪುಟ ಸೇರಿದೆ.
ಲೌ’ಗೆ ಕೇವಲ ಮೂರು ವರ್ಷವಿದ್ದು, ನೋಡೋಕೆ ಕಪ್ಪು ಮತ್ತು ಕಂದು ಬಣ್ಣದಲ್ಲಿದೆ. ಜೀವಂತವಿರುವ ಶ್ವಾನಗಳ ಪೈಕಿ ಅತ್ಯಂತ ಉದ್ದನೆಯ ಕಿವಿ ಹೊಂದಿರುವ ಶ್ವಾನ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ.
ಈ ಶ್ವಾನವನ್ನು ಪಶುತಜ್ಞೆ ಪೈಗ್ ಸಾಕುತ್ತಿದ್ದು, ಅತಿ ಹೆಚ್ಚು ಉದ್ದವಾಗಿರುವ ಅದರ ಕಿವಿಯನ್ನು ಅಳೆಯುವ ಕೆಲಸಕ್ಕೆ ಹೋಗಿರಲಿಲ್ಲ. ಕೊರೋನಾ ಲಾಕ್ ಡೌನ್ ವೇಳೆ ತಮಾಷೆಗೆ ಈ ಶ್ವಾನದ ಕಿವಿಯ ಅಳತೆಯನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬಳಿಕ ಇದನ್ನು ಗಿನ್ನಸ್ ದಾಖಲೆಗೆ ಸೇರಿಸಬಹುದೆಂದು ತಿಳಿದು ಈಗ ಲೌ ತನ್ನ ಉದ್ದನೆಯ ಕಿವಿ ಹೊಂದುವ ಗಿನ್ನಿಸ್ ನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ.