News Karnataka Kannada
Wednesday, May 01 2024
ವಿದೇಶ

ಕ್ವಾಡ್ ಸಭೆ : ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಸಮರ ಸಾರುವ ನಿರೀಕ್ಷೆ

Narendra Modi 15082021
Photo Credit :

ವಾಷಿಂಗ್ಟನ್‌ :  ಚೀನಾವನ್ನು ಜಾಗತಿಕವಾಗಿ ಕುಗ್ಗಿಸಲು  ರಚನೆಯಾಗಿರುವ ‘ಕ್ವಾಡ್‌’ (ಭಾರತ, ಅಮೆರಿಕ, ಆಸ್ಪ್ರೇಲಿಯಾ, ಜಪಾನ್‌) ದೇಶಗಳ ಮಹತ್ವದ ಶೃಂಗಸಭೆ ಶುಕ್ರವಾರ ನಡೆಯಲಿದೆ . ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಭಾರತದ ಪ್ರಧಾನಿ ನರೇಂದ್ರ ಮೋದಿ , ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಭಾಗವಹಿಸಲಿದ್ದಾರೆ. ಬೈಡೆನ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ಜತೆ ಮೋದಿ ನಡೆಸುತ್ತಿರುವ ಮೊದಲ ಮುಖಾಮುಖಿ ಸಭೆ ಇದಾಗಿದೆ.

ಶ್ವೇತಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಚೀನಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಸಮರ ಸಾರುವ ನಿರೀಕ್ಷೆ ಇದೆ. ಇಂಡೋ- ಪೆಸಿಫಿಕ್‌ ವಲಯವನ್ನು ವಿಶ್ವದ ಎಲ್ಲಾ ದೇಶಗಳಿಗೂ ಸ್ವತಂತ್ರ ಮತ್ತು ಮುಕ್ತವಾಗಿ ಇರಿಸುವ ಕುರಿತು ಪ್ರಧಾನಿ ಮೋದಿ ಬಲವಾಗಿ ಪ್ರತಿಪಾದಿಸುವ ಸಾಧ್ಯತೆ ಇದೆ. ಅಲ್ಲದೆ ಈ ವಲಯದಲ್ಲಿ ಆರ್ಥಿಕ, ಮಿಲಿಟರಿ ಸಹಕಾರದ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.

ಕಳೆದ 2 ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಕ್ವಾಡ್‌ ಸಭೆ ಆನ್‌ಲೈನ್‌ ಮೂಲಕವೇ ಆಯೋಜನೆಗೊಂಡಿತ್ತು. ಆದರೆ ಇದೀಗ 2 ವರ್ಷಗಳ ಬಳಿಕ ಎಲ್ಲಾ ನಾಲ್ಕು ದೇಶಗಳ ನಾಯಕರು ಖುದ್ದು ಸಭೆ ನಡೆಸುತ್ತಿದ್ದು, ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು