ನವದೆಹಲಿ : ವಿಶ್ವದ ಇತರ 13 ನಾಯಕರನ್ನು ಮೀರಿಸಿ ಪ್ರಧಾನಿ ಮೋದಿ ಅವರು ಮತ್ತೆ ವಿಶ್ವದಲ್ಲೇ ನಂ.1 ನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕದ ‘ಮಾರ್ನಿಂಗ್ ಕನ್ಸಲ್ಟ್’ ಎಂಬ ಟೆಕ್ ಇಂಟೆಲಿಜೆಂಟ್ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಅವರಿಗೆ ಶೇ.70ರಷ್ಟು ರೇಟಿಂಗ್ ಪಡೆದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್, ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯು ಸೇರಿದಂತೆ 13 ನಾಯಕರನ್ನು ಜನಪ್ರಿಯತೆಯನ್ನು ಅದು ಸಮೀಕ್ಷೆಗೆ ಒಳಪಡಿಸಿತ್ತು.
ಮೇ 2020ರಲ್ಲಿ ಶೇ.84 ಇದ್ದ ಮೋದಿ ರೇಟಿಂಗ್, ಈ ವರ್ಷ ಜೂನ್ನಲ್ಲಿ ಶೇ.66ಕ್ಕೆ ಇಳಿದಿತ್ತು. ಆದರೆ ಈಗ ಮತ್ತೆ ಸುಧಾರಿಸಿದ್ದು, ಶೇ.70ರಷ್ಟುಶ್ರೇಯಾಂಕ ಲಭ್ಯವಾಗಿದೆ.