ಶ್ರೀಲಂಕಾ : ಕೋವ್ಯಾಕ್ಸಿನ್ ಲಸಿಕೆ ಪಡೆದ ಭಾರತೀಯರಿಗೆ ಶ್ರೀಲಂಕಾ ಏರ್ ಲೈನ್ಸ್ ಭರ್ಜರಿ ಆಫರ್ ನೀಡಿದೆ. ಹೌದೂ, ಕೋವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ ಪಡೆದ ಭಾರತೀಯ ಪ್ರವಾಸಿಗರಿಗಾಗಿ ಶ್ರೀಲಂಕಾ ಏರ್ ಲೈನ್ಸ್ ಒಂದು ಟಿಕೆಟ್ ಗೆ ಮತ್ತೊಂದು ಟಿಕೆಟ್ ಉಚಿತವಾಗಿ ನೀಡಲಿದೆ.
ಈ ವೇಳೆ ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರಿಗೆ ಕ್ವಾರಂಟೈನ್ ನಲ್ಲಿರುವುದು ಅಗತ್ಯವಿಲ್ಲ. ಆದರೆ ಪ್ರಯಾಣದ ವೇಳೆ ನಡೆಸಿದ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿದ ಶ್ರೀಲಂಕಾ ಏರ್ ಲೈನ್ ನ ದಿಮುತು ತಿನಕೂನ್ ಅವರು, ಪ್ರಯಾಣಿಕರು ಕೊನೆಯ ಲಸಿಕೆಯ ಡೋಸ್ ಅನ್ನು ಪ್ರಯಾಣದ 14 ದಿನಗಳ ಮುಂಚಿತವಾಗಿ ಪಡೆದಿರಬೇಕಾಗಿದೆ.
ಶ್ರೀಲಂಕಾಗೆ ಬಂದ ಪ್ರಯಾಣಿಕರಿಗೆ ಹೋಟೆಲ್ ನಲ್ಲಿ ಕೊರೋನಾ ಪರೀಕ್ಷೆ ಮಾಡಲಿದ್ದು, ಪಾಸಿಟಿವ್ ಬಂದರೆ ಅಲ್ಲಿಯೇ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಎಂದರು. ಈಗಾಗಲೇ ಭಾರತದಲ್ಲಿ 65 ಕೋಟಿ ಜನರು ಲಸಿಕೆ ಪಡೆದಿದ್ದು, ಅವರಲ್ಲಿ ಸುಮಾರು 14 ಕೋಟಿ ಜನ ಎರಡೂ ಡೋಸ್ ಗಳ ಲಸಿಕೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ರಯಾಸೋದ್ಯಮದ ಉತ್ಸಾಹ ತುಂಬಲು ಶ್ರೀಲಂಕಾ ಏರ್ ಲೈನ್ಸ್ ಈ ಹೊಸ ಆಫರ್ ಕೊಟ್ಟಿದೆ.