ಪುಣೆ: ಕೋವಿಶೀಲ್ಡ್ & ಆಂಟಿ-ಕೋವಿಡ್ -19 ಲಸಿಕೆಯನ್ನ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದ್ದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಹಾಗೂ ಇಮ್ಯುನೊಜೆನಿಕ್ ಆಗಿದೆ ಎಂದು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮಂಗಳವಾರ ಹೇಳಿದೆ.
ಕೋವಿಶೀಲ್ಡ್ ನರವೈಜ್ಞಾನಿಕ ಮತ್ತು ಮಾನಸಿಕ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಆರೋಪಿಸಿದ್ದರು. ಈ ಆರೋಪವನ್ನು ನಿರಾಕರಿಸಿದ ಕಂಪೆನಿ, ಇವೆರಡರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಕೋವಿಶೀಲ್ಡ್ ಆಂಟಿ-ಕೋವಿಡ್ -19 ಲಸಿಕೆ ಅಡ್ಡಪರಿಣಾಮಗಳನ್ನು ಹೊಂದಿದೆ ಎಂಬ ಹೇಳಿಕೆಯನ್ನು ಕಂಪೆನಿಯು ಇದೀಗ ಸ್ಪಷ್ಟವಾಗಿ ನಿರಾಕರಿಸಿದೆ.
ಎಸ್ಐಐ ಭಾರತದಲ್ಲಿ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ನ ಕೋವಿಡ್ -19 ಲಸಿಕೆ ಅಭ್ಯರ್ಥಿಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ. ಪ್ರಸ್ತುತ, 26,000 ಭಾಗವಹಿಸುವವರನ್ನು ಒಳಗೊಂಡಂತೆ ಕೋವಾಕ್ಸಿನ್ನ ಹಂತ -3 ಕ್ಲಿನಿಕಲ್ ಪ್ರಯೋಗವನ್ನು ಭಾರತದಾದ್ಯಂತ ನಡೆಸಲಾಗುತ್ತಿದೆ.
ಲಸಿಕೆಯನ್ನ ಯುಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕಾದ ಅಗ್ರ ಫಾರ್ಮಾ ಕಂಪೆನಿ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸುತ್ತಿದೆ ಹಾಗೂ ಎಸ್.ಐ.ಐ ಇದರಲ್ಲಿ ಪಾಲನ್ನು ಹೊಂದಿದೆ.