ಕೊಲ್ಲಂ: ಕೋ ಅಪರೇಟಿವ್ ಬ್ಯಾಂಕ್ ಒಳಗಡೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಕೊಲ್ಲಂ ನಡೆದಿದೆ.
ಪೊಲೀಸರ ಪ್ರಕಾರ ಮೃತ ಮಹಿಳೆಯನ್ನು ಸತ್ಯವತಿ ಎಂದು ಗುರುತಿಸಲಾಗಿದೆ. ಈಕೆ ಪುತುಕುಲಂ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ಅರೆಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಉದ್ಯೋಗ ಸಂಬಂಧ ಚಿಂತೆಗೆ ಒಳಪಟ್ಟಿದ್ದರು ಎನ್ನಲಾಗಿದೆ. ತನಿಖೆ ಮುಂದುವರೆದಿದೆ.