News Karnataka Kannada
Saturday, April 27 2024
ವಿದೇಶ

ಒಲಿಂಪಿಕ್ಸ್‌ ನಲ್ಲಿ ದೇಶಕ್ಕೆ ಐತಿಹಾಸಿಕ ದಿನ ; ಜಾವೆಲಿನ್‌ ನಲ್ಲಿ ಸುವರ್ಣ ಗೆದ್ದ ನೀರಜ್‌ ಚೋಪ್ರಾ

Neeraj Chopra Gold
Photo Credit :

ಟೋಕಿಯೋ : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ಭಾರತದ ಪಾಲಿಗೆ ಸುವರ್ಣ ದಿನ. ಜಾವೆಲಿನ್ ಎಸೆತ ವಿಭಾಗದಲ್ಲಿ ಭಾರತದ ಹೆಮ್ಮೆಯ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ.
ಇಂದು ನಡೆದ ಆರು ಸುತ್ತುಗಳ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಪ್ರಾಬಲ್ಯ ಸಾಧಿಸಿ ಭಾರತಕ್ಕೆ ಚಿನ್ನದ ಉಡುಗೊರೆ ನೀಡಿದರು. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಟ್ಟು ಏಳು ಪದಕ ಲಭಿಸಿದಂತಾಗಿದೆ. 1 ಕಂಚು, 2 ಬೆಳ್ಳಿ ಮತ್ತು 4 ಕಂಚು ಪದಕಗಳು ದೊರೆತಿವೆ. 2008ರ ಒಲಿಂಪಿಕ್ಸ್ ನಂತರ ನೀರಜ್ ಚೋಪ್ರಾ ಭಾರತಕ್ಕೆ ಸುವರ್ಣ ಪದಕ ದಕ್ಕಿಸಿಕೊಟ್ಟರು.
ನೀರಜ್ ಸಾಧನೆಗೆ ಭಾರತದಲ್ಲಿ ಹರ್ಷದ ಹೊಳೆಯೇ ಹರಿದಿದ್ದು, ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ಪ್ರಧಾನಿ ಗಣ್ಯರ ಅಭಿನಂದನೆ : ನೀರಜ್ ಚೋಪ್ರಾ ಅಮೋಘ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು, ಖ್ಯಾತನಾಮರು ಅಭಿನಂದನೆ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು