News Karnataka Kannada
Monday, April 29 2024
ವಿದೇಶ

ಒಲಿಂಪಿಕ್ಸ್‌: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತದ ಪುರುಷರ ಹಾಕಿ ತಂಡ

Hocky Semi 03082021
Photo Credit :

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ಬೆಲ್ಜಿಯಂ ತಂಡದ ವಿರುದ್ಧ ಸೋಲು ಕಂಡಿದೆ.

ಮಂಗಳವಾರ ಬೆಳಗ್ಗೆ ಮುಗಿದ ಪಂದ್ಯದಲ್ಲಿ 5-2 ಅಂತರದಲ್ಲಿ ಭಾರತ ಹಾಕಿ ತಂಡ ಸೋಲನುಭವಿಸಿದೆ. ಬೆಲ್ಜಿಯಂ ತಂಡದ ವಿರುದ್ಧ 5-2 ಗೋಲುಗಳ ಅಂತರದಿಂದ ಭಾರತ ತಂಡ ಸೋಲು ಕಂಡಿದ್ದು, ಇನ್ನು ಕಂಚಿನ ಪದಕಕ್ಕೆ ಸೆಣಸಾಡಲಿದೆ.

ಪಂದ್ಯ ಮುಕ್ತಾಯ ನಂತರ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಸೋಲು-ಗೆಲುವು ಜೀವನದ ಭಾಗ. ನಮ್ಮ ಭಾರತದ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ ಪಂದ್ಯಕ್ಕೆ ಮತ್ತು ಭವಿಷ್ಯದ ಅಭಿಯಾನಕ್ಕೆ ತಂಡಕ್ಕೆ ಶುಭಾಶಯಗಳು, ನಮ್ಮ ಆಟಗಾರರ ಬಗ್ಗೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು