ನ್ಯೂಯಾರ್ಕ್: ಐಡಾ ಚಂಡಮಾರುತ ತಂದೊಡ್ಡಿದ ಮಹಾಮಳೆಗೆ ನ್ಯೂಯಾರ್ಕ್ ನಗರದಲ್ಲಿ ಪ್ರವಾಹ ಉಂಟಾಗಿದ್ದು, ಇಡೀ ನಗರ ಅಕ್ಷರಶಃ ತತ್ತರಗೊಂಡಿದೆ.
ಭಾರೀ ಮಳೆಯಿಂದ ಈ ವರೆಗೆ 8 ಮಂದಿ ಸಾವಿಗೀಡಾಗಿದ್ದು, ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.
ಬಿರುಗಾಳಿಯು ನ್ಯೂಜೆರ್ಸಿಯಲ್ಲಿ ಮನೆಗಳನ್ನು ನಾಶಪಡಿಸಿದೆ. ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಸಬ್ವೇ ರೈಲು ಮಾರ್ಗಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.
ನ್ಯೂಯಾರ್ಕ್ ನಗರದಲ್ಲಿ ಏಳು ಮಂದಿ ಮತ್ತು ನ್ಯೂಜೆರ್ಸಿಯ ಪಾಸೈಕ್ನಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.