ವಿಜಯಪುರ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ  10ನೇ ಆರೋಪಿಯಾಗಿರುವ ಚಿತ್ರನಟ ದರ್ಶನ  ಸಹಚರ ವಿನಯ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವಿಜಯಪುರದ ದರ್ಗಾ ಜೈಲಿಗೆ ಸ್ಥಳಾಂತರಗೊಂಡಿದ್ದಾನೆ.ದರ್ಶನ ಹಾಗೂ ಸಹಚರರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ದೊರಕಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ ಸೇರಿದಂತೆ ಇತರೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಹಸ್ತಾಂತರ ಮಾಡಲಾಗಿದೆ.

ಅದರಂತೆ ದರ್ಶನ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಢ ಬೆನ್ನಲ್ಲೇ ಪ್ರಕರಣದ 10ನೇ ಆರೋಪಿ ವಿನಯ ಕೂಡ ದರ್ಗಾ ಜೈಲಿಗೆ ಹಸ್ತಾಂತರ ಆಗಲಿದ್ದಾನೆ ಎಂದು ಕಳೆದ ನಾಲ್ಕು ದಿನಗಳಿಂದ ನಿರೀಕ್ಷೆಯಲ್ಲಿದ್ದರು. ಶುಕ್ರವಾರಷ್ಟೇ ದರ್ಗಾರ ಜೈಲು ಅಧಿಕಾರಿಗಳಿಗೆ ವಿನಯ ಸ್ಥಳಾಂತರದ ಅಧಿಕೃತ ಮಾಹಿತಿ ಲಭ್ಯವಾಗಿತ್ತು. ಕೊನೆಗೂ ಶನಿವಾರ ವಿನಯನನ್ನು ದರ್ಗಾ ಜೈಲಿಗೆ ತಂದು ಬಿಡಲಾಗಿದೆ.