ವಿಜಯಪುರ: ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ 8 ಮಂದಿ ಸಮೇತ ತೆಪ್ಪ ಮಗುಚಿಬಿದ್ದ ದುರಂತದಲ್ಲಿ ಈಗಗಾಲೆ ಮೂವರ ಶವ ಪತ್ತೆಯಾಗಿತ್ತು ಇದೀಗ ಮತ್ತೋರ್ವನ ಶವ ಪತ್ತೆಯಾಗಿದೆ.ಇನ್ನೊಬ್ಬನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಜುಲೈ 2 ರಂದು ಸಂಜೆ ತೆಪ್ಪ ಮುಳುಗಿ ಐವರು ನಾಪತ್ತೆ ಆಗಿದ್ದು, ಈವರೆಗೆ ಮೂವರ ಶವ ಪತ್ತೆಯಾಗಿದ್ದವು. ನಾಪತ್ತೆ ಆದವರಿಗಾಗಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದಾಗ ನದಿ ತೀರದಲ್ಲಿ ಶವವೊಂದು ತೇಲಿಬಂದಿದೆ. ಪತ್ತೆ ಆಗಿರುವ ಶವ ಮಹಿಬೂಬ್ ವಾಲೀಕಾರ ಎಂದು ಗುರುತಿಸಲಾಗಿದೆ. ಇದರೊಂದಿಗೆ ಬಳೂತಿ ಕೃಷ್ಣಾ ನದಿ ತೆಪ್ಪ ದುರಂತದಲ್ಲಿ ನಾಪತ್ತೆ ಆಗಿದ್ದ ಐವರಲ್ಲಿ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.