ವಿಜಯಪುರ : ಪಾನ್ ಶಾಪ್ ನಲ್ಲಿ ನಿಗೂಢ ಸ್ಪೋಟ ಸಂಭವಿಸಿದ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದಿದೆ.
ರವಿಕಿರಣ ಎಂಬುವವರಿಗೆ ಸೇರಿದ ಶೆಡ್ ಮಾದರಿಯ ಪಾನ್ ಶಾಪ್ ಆಗಿದೆ. ಪಾನ್ ಶಾಪ್ ನಲ್ಲಿ ನಿಗೂಢವಾಗಿ ಸ್ಪೋಟ ನಡೆದಿದೆ. ಪಾನ್ ಶಾಪ್ ಒಳಗೆ ಪ್ರಿಡ್ಜ್ ಗೆ ಯಾವುದೇ ಹಾನಿಯಿಲ್ಲ. ಹೊರಗಡೆಯಿಂದ ಸ್ಪೋಟವಾಗಿರೋ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಬಬಲೇಶ್ವರ ಪೊಲೀಸರ ದೌಡಯಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ, ಸೊಕೋ ತಂಡ ಶ್ವಾನದಳದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ.
ತನಿಖೆಯ ಬಳಿಕ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.

