ವಿಜಯಪುರ : ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಸಂಭವಿಸಿದ್ದ ತೆಪ್ಪ ಮಗುಚಿಬಿದ್ದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಮೂವರ ಶವ ಹೊರ ತೆಗೆಯಲಾಗಿದ್ದು, ನಾಪತ್ತೆ ಆಗಿರುವ ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರೆದಿದೆ.

ಇಸ್ಪಿಟ್‌ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಎಸ್ಕೇಪ್‌ ಆಗಲು 8 ಮಂದಿ ತೆಪ್ಪಹಿಡಿದು ಹೋಗಿದ್ದರು. ಆದರೆ ಅಲೆ ರಭಸಕ್ಕೆ ತೆಪ್ಪ ಮಗುಚಿಕೊಂಡಿದೆ. ಇನ್ನು ಈ ಘಟನೆಯಲ್ಲಿ ತಕ್ಷಣ ಇಬ್ಬರನ್ನು ರಕ್ಷಿಸಿಲಾಗಿದ್ದು ಇಬ್ಬರ ಶವಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ಐವರಲ್ಲಿ ಮೂವರ ಶವ ಪತ್ತೆ ಯಾಗಿದೆ. ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ.

ಇತ್ತ ಇನ್ನೂ ನಾಪತ್ತೆ ಆಗಿರುವ ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲೀಕಾರ ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಋಷಿಕೇಶ ಭಗವಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.