ವಿಜಯಪುರ: ಗುಮ್ಮಟ ನಗರ ವಿಜಯಪುರದ ಐತಿಹಾಸಿಕ ಗಣಪತಿ ಚೌಕ್​ನಲ್ಲಿ ಕಲ್ಲೆಸೆದು ವಿಕೃತಿ ಮೆರೆದಿದ್ದ ಇಬ್ಬರು ಮುಸ್ಲಿಂ ಯುವಕರನ್ನ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದ ಅಫಜಲಪುರ ಟಕ್ಕೆ ನಿವಾಸಿಗಳಾದ ಸೋಹೆಲ್ ಜಮಾದಾರ್ ಹಾಗೂ ಜುಬೇರ್ ಬಂಧಿತ ಆರೋಪಿಗಳು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಆಧಾರದ ಮೇಲೆ ಈ ಇಬ್ಬರು ದುರುಳರನ್ನ ಬಂಧಿಸಿದ್ದಾರೆ.

ಅಕ್ಟೋಬರ್ 3 ರ ಮಧ್ಯರಾತ್ರಿ 1 ಗಂಟೆಗೆ ಆಟೋದಲ್ಲಿ ಗಣೇಶ ವೃತ್ತದ ಬಳಿ ಬಂದ ಕಿಡಿಗೇಡಿಗಳು, ಕಲ್ಲು ಎಸೆಯಲು ಮುಂದಾಗುತ್ತಾರೆ. ಈ ವೇಳೆ ಸ್ಥಳಕ್ಕೆ ಬಂದ್ ಹೋಮ ಗಾರ್ಡ್, ಇಬ್ಬರನ್ನ ತಡೆಯಲು ಮುಂದಾಗಿದ್ದರು. ಈ ವೇಳೆ ಇಬ್ಬರು ಕಲ್ಲು ತೂರಾಟ ಮಾಡಿ, ಬಳಿಕ ಅದರ ಪೋಟೋ ತೆಗೆದುಕೊಂಡು ಹೋಗುತ್ತಾರೆ. ವಿಡಿಯೋದಲ್ಲಿ ಕಂಡ ಆಟೋದ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಿದ್ದಾರೆ.

ಘಟನೆ ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆ ಮುಖಂಡರು ದೂರು ದಾಖಲಿಸಿದ್ದರು. ಜೊತೆಗೆ ಕತ್ಯದಲ್ಲಿ ಸೆರೆಸಿಕ್ಕ ಆಟೋ, ನಿತ್ಯ ಆಶ್ರಮ ರಸ್ತೆಯಲ್ಲಿ ಓಡಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ತನಿಖೆ ನಡೆಸಿ ಇಬ್ಬರನ್ನ ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ಬೇಕಂತಲೇ ಕಲ್ಲು ಎಸೆದು ಕೋಮ ಗಲಭೆ ಹಬ್ಬಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಡಿಯೋ ವೈರಲ್ ಆಗುತ್ತಲ್ಲೇ ಆಕ್ರೋಶಗೊಂಡ ಹಿಂದೂ ಮುಖಂಡರು, ನೇರ ಸವಾಲು ಹಾಕಿದ್ದಾರೆ. ನವರಾತ್ರಿ ಹಬ್ಬದ ಪ್ರಯುಕ್ತ ಶಾಂತವಾಗಿದ್ದೇವೆ. ಮುಂದಿನ ದಿನಗಳಲ್ಲಿ ನಿಮಗೆ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ‌. ಘಟನೆ ಬಳಿಕ ಇಡೀ ವಿಜಯಪುರದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂತವಾಗಿದ್ದ ವಿಜಯಪುರದಲ್ಲಿ ದುರುಳರಿಬ್ಬರು ಬೆಂಕಿ ಹಚ್ಚಲು ಯತ್ನಿಸಿದ್ದಾರೆ.