ವಿಜಯಪುರ:  ಬಸ್ ಓವರ್ ಟೆಕ್ ಮಾಡಲು ಹೋಗಿ ಟೆಂಪೋ ಪಲ್ಟಿಯಾಗಿರೋ ಘಟನೆ ಸಿಂದಗಿ ತಾಲೂಕಿನ ಮಣ್ಣಾಪುರ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ 20 ಜನರಿಗೆ ಗಾಯಗಳಾಗಿದ್ರೆ ಮೂವರ ಸ್ಥಿತಿ ಗಂಭೀರವಾಗಿದೆ. ಇಡೀ ಕುಟುಂಬ ಇಂದು ಟೆಂಪೋದಲ್ಲಿ ಗೋಲಗೇರಿಯ ಗೊಲ್ಲಾಳೇಶ್ವರ ದೇಗುಲಕ್ಕೆ ಹೊರಟಿತ್ತು. ವೇಗವಾಗಿ ಟೆಂಪೋ ಓಡಿಸುತ್ತಿದ್ದ ಚಾಲಕ, ಬಸ್ ಓವರ್ ಟೆಕ್ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ.

ಟೆಂಪೋ ಪಲ್ಟಿಯಿಂದ 20ಕ್ಕೂ ಅಧಿಕ ಜನರಿಗೆ ಗಾಯವಾಗಿದೆ. 6 ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಅದರ ಚಾಲಕಾ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿಂದಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.