Showing 20 of 3361 posts • Page 138 of 169
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳನಗರ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಎಂಆರ್ ಜಿ ಗ್ರೂಪ್ ನ ಪ್ರಾಯೋಜಕತ್ವದಲ್ಲಿ ಸತತ 3ನೇ ಬಾರಿಗೆ ಎರಡು ದಿನಗಳ ‘ಬೃಹತ್ ಉದ್ಯೋಗ ಮೇಳ
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿವಾದ ವಿಚಾರವಾಗಿ ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಕಾರ್ಕಳದ ಪ್ರವಾಸೋದ್ಯಮದ ಕಗ್ಗೊಲೆ ಮಾಡಿದೆ. ಥೀಂ ಪಾರ್ಕ್ ಗೆ ಸರಕಾರ 4.50 ಕೋಟಿ ಹಣ ಮಂಜೂರಾರರೂ ಸರಕಾರ ಬಿಡುಗಡೆ ಮಾಡಿಲ್ಲ.
ಉಡುಪಿ ಶ್ರೀ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ “ಕನಕದಾಸರ 537ನೇ ಜಯಂತಿ ಮಹೋತ್ಸವ” ಹಾಗೂ 351 ಕುಂಭ ಕಳಸ ಮೆರವಣಿಗೆ ಇದೇ ನ. 18ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಸಂಘದ ಖಜಾಂಚಿ ವಗೇನಪ್ಪ ಎಳಮಲಿ ತಿಳಿಸಿದರು.
ಶಿಲ್ಪಿ ಕೃಷ್ಣ ನಾಯಕ್ ರಿಗೆ ಕಾರ್ಕಳ ಪರುಶುರಾಮ್ ಥೀಮ್ ಪಾರ್ಕ್ ನಲ್ಲಿ ಕಂಚಿನ ಪರುಶುರಾಮ್ ಮೂರ್ತಿ ನಿರ್ಮಾಣಕ್ಕೆ ನೀಡಲಾಗಿತ್ತು.
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಿರ್ಮಿತಿ ಕೇಂದ್ರದ ಇಂಜಿನಿಯರ್, ಅಧಿಕಾರಿಗಳು ಹಾಗೂ ಶಾಸಕರನ್ನು ಬಂಧಿಸುವ ಪ್ರಮೇಯ ಬರಬಹುದು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಎಸ್ ಐ ಸೇರಿದಂತೆ ಇಬ್ಬರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಕಾರ್ಕಳ ಪರಶುರಾಮ ಮೂರ್ತಿ ರಚಿಸಿದ ಕಲಾವಿದ ಕೃಷ್ಣ ನಾಯ್ಕ್ ಬಂಧನ ವಿಚಾರವಾಗಿ ಉಡುಪಿಯಲ್ಲಿ ಕಾಂಗ್ರೆಸ್ ನಾಯಕ ಉದಯ ಕುಮಾರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನವೆಂಬರ್ 14ರಿಂದ 20ರವರೆಗೆ ಉಡುಪಿ ಜಿಲ್ಲೆಯಾದ್ಯಂತ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಂತಾರ ಫ್ರೀಕ್ವೆಲ್ ನಲ್ಲಿ ಭಾಗಿಯಾಗಿದ್ದ ಚಿತ್ರದ ಜ್ಯೂನಿಯರ್ ಕಲಾವಿದರು ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ, ಹಿರಿಯಡಕ ಕುದಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ಅವರು ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಉಡುಪಿಯ ಮಹಾಲಕ್ಷ್ಮೀ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಪ್ರಕರಣ ಇಂದು ದೇವಸ್ಥಾನದ ಅಂಗಳ ತಲುಪಿದೆ.
ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ 3182 ಒಳಗೊಂಡ ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಸಂತೆಕಟ್ಟೆ, ಉಡುಪಿ ಚೇತನ ಹಾಗೂ ರೋಟರಿ ಸಂಸ್ಥೆ ಅಂಬಲಪಾಡಿ, ಕಲ್ಯಾಣಪುರ, ಉಡುಪಿ ಮಿಡ್ ಟೌನ್ ಹಾಗೂ ಬ್ರಹ್ಮಾವರ ಇವರ ವತಿಯಿಂದ ಮಣಿಪಾಲ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಸಹಯೋಗದೊಂದಿಗೆ ಆಯೋಜಿಸಿದ್ದ “ನನ್ನ ನಾಡು ನನ್ನ ಹಾಡು” ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಉಡುಪಿ ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ ಶನಿವಾರ ನಡೆಯಿತು.
ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ ಆರಾಧನೆ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಎಚ್ ಸಿ ವಿಜಯಶಂಕರ್ ಭಾಗವಹಿಸಿದರು.
ಮಣಿಪಾಲ ಸಮೀಪದ ಕೆಳಪರ್ಕಳದಲ್ಲಿ ಗ್ರಾನೈಟ್ ತುಂಬಿದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ನಲ್ಲಿ ಇದ್ದ ಹಲವು ವಾಹನಗಳ ಮೇಲೆ ಬಿದ್ದಿದೆ.
ಚೇರ್ಕಾಡಿ ಗ್ರಾಮದಲ್ಲಿ ಮಹಿಳೆ, ಮಕ್ಕಳಿಗೆ ಕಿರುಕುಳ ನೀಡಿದ್ದ ಅರೋಪ ಕೇಳಿಬಂದಿದ್ದು, ಅಪರಿಚಿತ ವ್ಯಕ್ತಿಯಿಂದ ಕಿರುಕುಳವಾಗುತ್ತಿದೆ ಎಂದು ದೂರಲಾಗಿತ್ತು.
ಮಹಿಳೆಗೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿ ಠಾಣೆಯಲ್ಲೇ ಮೃತಪಟ್ಟಿದ್ದಾನೆ. ಬ್ರಹ್ಮಾವರ ಪೊಲೀಸ್ ಠಾಣೆಯ ಸೆಲ್ ನ ಬಾತ್ ರೂಮಿನಲ್ಲಿ ಈ ಘಟನೆ ನಡೆದಿದೆ.
ವಕ್ಫ್ ಬೋರ್ಡ್ ವಿಷಯದಲ್ಲಿ ಸರಕಾರದ ಕಾನೂನು ತುಂಬಾ ದುರ್ಬಲವಾಗಿದ್ದು, ಇದರಿಂದ ಜನರಿಗೆ ಬಹಳಷ್ಟು ಅನ್ಯಾಯ ಆಗುತ್ತಿದೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಮಾಡಿರುವ ಎಲ್ಲಾ ಆರೋಪದ ಬಗ್ಗೆ ಯಾವುದೇ ರೀತಿಯ ತನಿಖೆಗೆ ಸ್ವಾಗತ ಎಂದು ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಮಹಾಲಕ್ಷ್ಮಿ ಬ್ಯಾಂಕ್ ನ ಮಲ್ಪೆ ಬ್ರಾಂಚ್ ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದ್ದು, ಅದನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.