ಉಡುಪಿ: ಸುಮಾರು 3-4 ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅವಕಾಶ ಸಿಗುತ್ತಿಲ್ಲ ಹೊಸ ಪಡಿತರ ಚೀಟಿ ಪಡೆಯಲು ಅರ್ಹತೆ ಇರುವ ಬಡವರು ಅದನ್ನು ನಂಬಿಕೊಂಡು ಬದುಕುವವರು ಅವಕಾಶ ಇಲ್ಲದೆ ಪಡಿತರಕ್ಕೆ ಆಗಲಿ ವೈದ್ಯಕೀಯ ಚಿಕಿತ್ಸೆಗೆ ಶಿಕ್ಷಣಕ್ಕೆ ಹಾಗೂ ಮೂಲಭೂತ ಸೌಕರ್ಯ ಪಡೆಯಲು ತುಂಬಾ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಆದ್ದರಿಂದ ತುರ್ತಾಗಿ ಅಲ್ಪಸಮಯದ ವರೆಗಾದರೂ ಅರ್ಹತೆ ಇರುವವರು ಬಿಪಿಎಲ್ ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.
ಹಾಗೂ ಎಪಿಎಲ್ ಪಡಿತರ ಚೀಟಿಗೆ ಅರ್ಹತೆ ಹೊಂದಿದ್ದು, ಎಪಿಎಲ್ ಪಡಿತರ ಚೀಟಿ ಮಾಡಲು ಅವಕಾಶ ನೀಡಿರುವುದಿಲ್ಲ. ಈ ಬಗ್ಗೆ ತುರ್ತಾಗಿ ಗಮನಿಸಿ ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಅವರು ಕರ್ನಾಟಕ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

