ಉಡುಪಿ: ಎಸ್ಐಆರ್ ಕಡ್ಡಾಯ ಜಾರಿ ವಿಚಾರವಾಗಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಎಸ್ಐಆರ್ ಗೆ ತೊಂದರೆ ನೀಡಬಾರದು ಎಂದು ಹೇಳಿದೆ. ಸ್ವತಹ ಪಶ್ಛಿಮಬಂಗಾಳ ಮುಖ್ಯಮಂತ್ರಿ ವಾದ ಮಂಡಿಸಿದರು. ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಕೊಟ್ಟಿದೆ. ಭಾರತ ದೇಶದಲ್ಲಿ ಇಸ್ಲಾಮಿಕರಣ ಮಾಡುವುದು ರೋಹಿಂಗ್ಯಾಗಳ ಉದ್ದೇಶ ಎಂದರು.
ಸರ್ಕಾರ ಬೆಂಗಳೂರಿನಲ್ಲಿ 250 ಜನ ಬಾಂಗ್ಲಾ ಪ್ರಜೆಗಳು ಇದ್ದಾರೆ ಎಂದು ಹೇಳುತ್ತದೆ. ಹಿಂದಿನ ಒಬ್ಬ ಕಮಿಷನರ್ ಹೇಳಿಕೆ ಪ್ರಕಾರ ಬೆಂಗಳೂರಿನಲ್ಲಿ 5 ಲಕ್ಷ ಬಾಂಗ್ಲಾ ವಲಸಿಗರು ಇದ್ದಾರೆ. ಪ್ರತ್ಯೇಕ ಎಸ್ಐಟಿ ಮಾಡುವುದಾಗಿ ಹೇಳಿದ್ದಾರೆ. ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಬೇಕು. ಎಸ್ ಐ ಆರ್ ಜಾರಿಯಾಗುವುದು ಅವಶ್ಯಕ ಎಂದರು.

