ಉಡುಪಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ವಿಚಾರವಾಗಿ ಶಾಸಕ ಬಸವಣಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಲವ್ ಜಿಹಾದ್ ಕರಾವಳಿ ಭಾಗದಲ್ಲಿ ಹೆಚ್ಚು ಆಗುತ್ತಿದೆ. ಮೊದಲು ಹಿಂದುಗಳು ಜಾಗೃತ ಆಗಬೇಕು. ನಮ್ಮ ಕುಟುಂಬದ ಮಕ್ಕಳನ್ನ ಸರಿಯಾಗಿ ಗಮನಿಸಬೇಕು. ಲವ್ ಜಿಹಾದ್ ದೊಡ್ಡ ಜಾಗತಿಕ ಜಾಲ ಎಂದರು.
ಬೆಂಗಳೂರಿನಲ್ಲಿ ಬ್ರಾಹ್ಮಣ ಹೆಣ್ಣುಮಗಳನ್ನು ಮದುವೆಯಾಗಿ ಮಗುಕೊಟ್ಟು ಮತ್ತೊಂದು ಮದುವೆಯಾದ ಪ್ರಕರಣ ನಡೆದಿದೆ. ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಅಪಾಯ ಖಂಡಿತ. ಈ ಸರಕಾರ ಅಂತೂ ಏನು ಮಾಡಲ್ಲ. 18 ವರ್ಷ ಪ್ರಾಯವಾದರೆ ಕಾನೂನಾತ್ಮಕವಾಗಿ ಏನು ಮಾಡಲು ಬರಲ್ಲ. ತಂದೆ ತಾಯಿ ಒಪ್ಪಿಗೆ ಇಲ್ಲದೆ ಇಂತಹ ಮದುವೆಗಳಿಗೆ ಅವಕಾಶ ನೀಡಬಾರದು. ಕಾನೂನು ಜಾರಿ ಮಾಡುವ ಸರ್ಕಾರ ಬರಬೇಕು ಕಾಂಗ್ರೆಸ್ ನಿಂದ ಆಗಲ್ಲ ಎಂದರು.

