ಉಡುಪಿ: ಸಾಲಿಗ್ರಾಮ ಇಲ್ಲಿನ ಪ್ರಸಿದ್ಧ ಆಂಜನೇಯ ದೇವಸ್ಥಾನದ ದೇವರಿಗೆ ನ. 12ರಂದು ಸ್ವರ್ಣಲೇಪಿತ ಕವಚ ಸಮರ್ಪಣಾ ಮಹೋತ್ಸವವು ಧಾರ್ಮಿಕ ಶ್ರದ್ಧಾಭಕ್ತಿಯಿಂದ ಜರುಗಿತು.

ಮಹೋತ್ಸವದ ಅಂಗವಾಗಿ ಬೆಳಿಗ್ಗೆ 5.30ಕ್ಕೆ ನವಕ ಪ್ರಧಾನ ಕಲಶಾಭಿಷೇಕ ನೆರವೇರಿತು. ಸಂಜೆ 4 ಗಂಟೆಯಿಂದ ಸಮರ್ಪಣಾ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಗುರುನರಸಿಂಹ ದೇವಸ್ಥಾನದಿಂದ ಪುರಮೆರವಣಿಗೆ ನಡೆಯಿತು. ಸಂಜೆ 5.30ರಿಂದ ಆಂಜನೇಯ ದೇವರಿಗೆ ವಿಶೇಷ ರಂಗಪೂಜೆ ಸೇವೆ ಸಮರ್ಪಿಸಲಾಯಿತು.

ಬೆಂಗಳೂರಿನ ಕೆ. ಯಜ್ಞನಾರಾಯಣ ಹೇರ್ಳೆ ಅವರು ಭಕ್ತರ ಪರವಾಗಿ ಸ್ವರ್ಣಲೇಪಿತ ಕವಚವನ್ನು ಆಂಜನೇಯ ದೇವರಿಗೆ ಸಮರ್ಪಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಈ ಸಮರ್ಪಣಾ ಮಹೋತ್ಸವದಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಕೃತಾರ್ಥರಾದರು.