ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಶೈನ್ ಫೌಂಡೇಶನ್ ಸಹಯೋಗದಲ್ಲಿ ನಡೆಯುತ್ತಿರುವ ರಾಷ್ಟ್ರಿಯ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವ `ಸೈನೆರ್ಜಿಯಾ- ೨೦೨೬’ ಕಾರ್ಯಕ್ರಮದಲ್ಲಿ ಟೀಮ್ ಚಾಲೆಂಜರ್ಸ್ ಮತ್ತು ನೈನೆಟ್ರಾನ್ ಟೆಕ್ ಪ್ರಾಯೋಜಕತ್ವದಲ್ಲಿರಾಷ್ಟ್ರಿಯ ಮಟ್ಟದ ಏರೋ-ಟೆಕ್ ಉತ್ಸವ ಏರೋಫಿಲಿಯಾ ಏರ್ ಶೋ ಆಯೋಜಿಸಲಾಗಿದೆ.

ಈ ಉತ್ಸವದಲ್ಲಿ ಏರೋಮಾಡೆಲಿಂಗ್ ಪ್ರದರ್ಶನಗಳು, ಡ್ರೋನ್ ರೇಸಿಂಗ್, ರಿಮೋಟ್ ಕಂಟ್ರೋಲ್ ವಿಮಾಣಗಳ ಹಾರಾಟ, ಏರ್ ಶೋಗಳು, ಗೇಮಿಂಗ್ ಸ್ಪರ್ಧೆಗಳು ಹಾಗೂ ಸಂವಾದಾತ್ಮಕ ಕಾರ್ಯಾಗಾರಗಳು ನಡೆಯಲಿದ್ದು, ಇದು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುವುದು ಇದರ ಉದ್ದೇಶವಾಗಿದೆ.