ಉಡುಪಿ: ದ್ವೇಷ ಭಾಷಣ ಕಾನೂನು ಜಾರಿಗೂ ಮುನ್ನ ನೋಟಿಸ್ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಈಗ ಕಾಂಗ್ರೆಸ್ ಸರಕಾರ ಇದೆ. ದ್ವೇಷ ಭಾಷಣ ವಿರುದ್ಧ ಕಾನೂನು ರೀತಿಯಲ್ಲಿ ಮಸೂದೆ ತಂದಿದ್ದೇವೆ. ಭವಿಷ್ಯದಲ್ಲಿ ಯಾವತ್ತಾದರೂ ಬಿಜೆಪಿ ಸರಕಾರ ಬರಬಹುದು ಎಂದರು.
ಅವರು ನಮ್ಮ ವಿರುದ್ಧವೂ ಇದನ್ನು ಬಳಕೆ ಮಾಡಬಹುದು. ದೇಶದ ಐಕ್ಯತೆ ಸಮಗ್ರತೆ ಒಂದೇ ದ್ವೇಷ ಭಾಷಣ ಮಸೂದೆಯ ಉದ್ದೇಶ. ಜನರು ಒಟ್ಟಿಗೆ ಇರಬೇಕಾದರೆ ಜಾತಿ, ಸ್ಥಳ, ಭಾಷೆ, ವ್ಯಕ್ತಿತ್ವಗಳನ್ನು ನಿಂದಿಸಬಾರದು. ಈ ಕಾರಣಕ್ಕೆ ಸಂವಿಧಾನದ ಆಶಯದಂತೆ ಮಸೂದೆ ತಂದಿದ್ದೇವೆ ಎಂದರು.
ಬಿಜೆಪಿಯವರು ಏನಾದರೂ ಹೇಳಲಿ, ದೇಶದ ಸಂವಿಧಾನಕ್ಕೆ ಧಕ್ಕೆ ಬರಬಾರದು ಎಂಬುದು ಮಾತ್ರ ನಮ್ಮ ಉದ್ದೇಶ. ಕಾಂಗ್ರೆಸಿನವರು ಯಾರಾದರೂ ದ್ವೇಷ ಭಾಷಣ ಮಾಡಿದರೆ ಕಾಂಗ್ರೆಸ್ನವರ ಮೇಲು ಕಾನೂನು ಜಾರಿಯಾಗುತ್ತದೆ. ವ್ಯಕ್ತಿಗಳ ಹಿನ್ನೆಲೆಯನ್ನು ನೋಡಿ ನೋಟಿಸ್ ಕೊಟ್ಟಿರಬಹುದು. ನೋಟಿಸ್ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಅವರ ಹಿನ್ನೆಲೆ ನೋಡಿ ಅಪಾಯ ಆಗಬಾರದು ಎಂದು ನೋಟಿಸ್ ಕೊಟ್ಟಿರಬಹುದು ಎಂದರು.

