ಉಡುಪಿ: ಪರ್ಯಾಯ ವೇಳೆ ಜಿಲ್ಲಾಧಿಕಾರಿ ಭಗವಾದ್ವಜ ಹಾರಿಸಿದ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಉಡುಪಿಯ ಪರ್ಯಾಯ ಒಂದು ಧಾರ್ಮಿಕ ಕಾರ್ಯಕ್ರಮ. ಸಂಸ್ಕೃತಿ ಧಾರ್ಮಿಕತೆಗೆ ಉಡುಪಿ ಹೆಸರುವಾಸಿ. ಈ ವಿಚಾರ ನನಗೆ ಗೊತ್ತಿದೆ. ದ್ವಜ ಹಾರಿಸಿದ ವಿಚಾರ ಅಲ್ಲಿಗೆ ಬಿಟ್ಟುಬಿಡಿ ಎಂದರು.
ಅಲ್ಲಿ ನಡೆದಿರುವುದು ಧಾರ್ಮಿಕ ಕಾರ್ಯಕ್ರಮ. ಧಾರ್ಮಿಕ ಮನೋಭಾವನೆಯನ್ನು ಕೆರಳಿಸುವ ಕೆಲಸ ಮಾಡಬಾರದು. ಯಾರು ಏನೇ ಮಾತಾಡಲಿ, ಅಗತ್ಯ ಬಿದ್ದರೆ ನಾನು ಚರ್ಚಿಸುತ್ತೇನೆ ಎಂದರು.

