ಉಡುಪಿ: ಶಾಸಕಿ ಭಾಗೀರಥಿ ಮುರುಳ್ಯ ಅವಮಾನ ವಿಚಾರವಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಜನರ ಮಾನಸಿಕತೆ ಗೊತ್ತಾಗುತ್ತೆ, ಶಾಸಕಿ ಆಗುವುದು ಸುಲಭದ ಕೆಲಸ ಅಲ್ಲ ಎಂದರು.
ಪಕ್ಷ ಟಿಕೆಟ್ ನೀಡಬಹುದು ಜನರ ಒಲವಿನಿಂದ ಅವರು ಶಾಸಕಿಯಾಗಿದ್ದಾರೆ. ಕೆಟ್ಟದಾಗಿ ಸಾಮಾಜಿಕ ಜಾಲತಾಣದ ಬರಹವನ್ನು ನಾನು ಖಂಡಿಸುತ್ತೇನೆ. ಕಠೋರವಾದ ಕಾನೂನು ಕ್ರಮ ಆಗಲೇಬೇಕು.
ಸಿದ್ದರಾಮಣ್ಣನ ವಿರುದ್ಧ ಬರೆದರೆ ರಾತ್ರಿ ಪತ್ರಕರ್ತರನ್ನು ಎತ್ತಿಕೊಂಡು ಹೋಗುತ್ತಾರೆ. ನಡುರಾತ್ರಿ ಸಾಮಾಜಿಕ ಜಾಲತಾಣ ನಿರ್ವಾಹಕರನ್ನು ತೆಗೆದುಕೊಂಡು ಹೋಗಿದ್ದಾರೆ. ಹತ್ತು ದಿನ ಜೈಲಿಗೆ ಹಾಕಿದ್ದಾರೆ ಎಂದರು.
ಸಿದ್ದರಾಮಯ್ಯನವರಿಗೆ ಒಂದು ಕಾನೂನು ಶಾಸಕಿಗೆ ಮತ್ತೊಂದು ಕಾನೂನು ಇದ್ಯಾ, ಸಿದ್ದರಾಮಯ್ಯ ವಿರುದ್ಧ ಬರೆದಾಗ ಏನು ಕಾನೂನು ಕ್ರಮ ಆಗಿದೆಯೋ ಅದೇ ಕ್ರಮ ಇಲ್ಲೂ ಆಗಬೇಕು. ದಲಿತ ಮಹಿಳೆಯ ಮೇಲೆ ಜಾತಿನಿಂದನೆಯಾಗಿದೆ. ತಕ್ಷಣ ಆ ವ್ಯಕ್ತಿಯನ್ನು ಬಂಧಿಸಬೇಕು ಎಂದರು.

