ಉಡುಪಿ: ಕೇರಳ ಕನ್ನಡ ಶಾಲೆಗಳ ಮೇಲೆ ಮಲಯಾಳಂ ಹೇರಿಕೆ ವಿಚಾರವಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಕೇರಳ ಯಾವತ್ತು ದ್ವಂದ್ವ ನೀತಿ ಅನುಸರಿಸುತ್ತಿದೆ. ಈ ಹಿಂದೆಯೇ ಕನ್ನಡ ಪ್ರದೇಶವಾದ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯ ಮಾಡುವ ಪ್ರಕ್ರಿಯೆ ನಡೆದಿತ್ತು. ನಮ್ಮ ಹಿರಿಯರ ಹೋರಾಟದ ಪರಿಣಾಮವಾಗಿ ಮುಂದೂಡಿಕೊಂಡು ಬಂತು. ಈಗ ಮತ್ತೆ ಕಮ್ಯುನಿಸ್ಟ್ ಸರ್ಕಾರ ಕನ್ನಡದ ಮೇಲೆ ಗದಾಪ್ರಹಾರಕ್ಕೆ ಹೊರಟಿದೆ ಎಂದರು.
ನಾನು ಈ ಬೆಳವಣಿಗೆಯನ್ನು ಖಂಡಿಸುತ್ತೇನೆ. ಕಾಸರಗೋಡಿನಲ್ಲಿ ಕನ್ನಡವೇ ಪ್ರದಾನ ಭಾಷೆ. ಕನ್ನಡದ ಸ್ಥಾನವನ್ನು ಉಳಿಸಿ ಮಲಯಾಳಂ ಗೆ ಆದ್ಯತೆ ಕೊಡಿ. ಕನ್ನಡಕ್ಕೆ ಆ ಪ್ರದೇಶದಲ್ಲಿ ಮೊದಲ ಆದ್ಯತೆ ಸಿಗಬೇಕು. ಇಲ್ಲವಾದರೆ ಜನ ಉತ್ತರ ಕೊಡುತ್ತಾರೆ. ನಮ್ಮ ರಾಜ್ಯ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯನವರು ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳಬೇಕು. ಕನ್ನಡ ಕೊನೆಗಾಣಿಸುವ ಪ್ರಯತ್ನ ನಡೆದರೆ ನಮ್ಮಲ್ಲೂ ಸಾಕಷ್ಟು ಮಂದಿ ಕೇರಳಿಗರಿದ್ದಾರೆ ಎಂದರು.
ಬೆಂಗಳೂರು ಘಟನೆಗೆ ಕೇರಳ ವರ್ತನೆ ನೋಡಿದ್ದೇವೆ. ನಮ್ಮ ರಾಜ್ಯದಲ್ಲಿ ಕೇರಳಿಗರು ಇರುವ ಪ್ರದೇಶದಲ್ಲಿ ಅವರ ವರ್ತನೆ ನೋಡಿದ್ದೇವೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದರು.

