ಉಡುಪಿ: ಗಡಿಯಲ್ಲಿ 400 ಕೋಟಿ ದರೋಡೆ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. 400 ಕೋಟಿಯ ವಿಚಾರ ಕೇಳಿ ನನ್ನ ಎದೆ ಜಲ್ ಎಂದಿತ್ತು. 400 ಕೋಟಿ ದರೋಡೆ ಅಂತೆ. ಅದನ್ನು ನಮ್ಮ ಪೊಲೀಸರು ಚೇಸ್ ಮಾಡಿ ಹಿಡಿದಿದ್ದಾರಂತೆ ಎಂದರು.
ಪೊಲೀಸರಿಗೆ ಮೊದಲನೆಯದಾಗಿ ಅಭಿನಂದನೆಗಳು. ನಾನು ಕನಸಿನಲ್ಲು 400 ಕೋಟಿ ಊಹಿಸಿಲ್ಲ, ಆ ಹಣ ಎಲ್ಲಿಂದ ಬಂತು ಎಲ್ಲಿಗೆ ಹೋಗ್ತಾ ಇತ್ತು ಯಾರಿಗೆ ಸಂಬಂಧಪಟ್ಟಿದ್ದು ತನಿಖೆಯಿಂದ ಹೊರ ಬರಲಿ ಎಂದರು.

