ಉಡುಪಿ: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕರಾವಳಿಯಲ್ಲಿ ಟೆಂಪಲ್ ರನ್ ಮಾಡುತ್ತಿದ್ದು, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳಕ್ಕೆ ಎಚ್ ಡಿ ಕುಮಾರ್ ಸ್ವಾಮಿ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಇಂದು ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ನವಚಂಡಿಕಾಯಾಗ ಮಾಡಿಸಿದರು.
ಕುಟುಂಬ ಸಮೇತರಾಗಿ ಯಾಗದಲ್ಲಿ ಹೆಚ್ ಡಿಕೆ ಪಾಲ್ಗೊಂಡರು. ಕುಟುಂಬದ ದೋಷ ಪರಿಹಾರಕ್ಕಾಗಿ ನವಚಂಡಿಕಾಯಾಗವನ್ನು ಎಚ್ ಡಿಕೆ ನಡೆಸಿದರು. ಅರ್ಚಕ ಶ್ರೀಕಾಂತ್ ಅಡಿಗ ನೇತೃತ್ವದಲ್ಲಿ ನವಚಂಡಿಕಾಯಾಗ ನಡೆಯಿತು. ಮುಂಜಾನೆ 6ರಿಂದ 10 ಗಂಟೆಯವರೆಗೆ ನವಚಂಡಿಕಾಯಾಗ ನಡೆಯಿತು. 10ಗಂಟೆಗೆ ಪೂರ್ಣಾಹುತಿ ನಡೆಯಿತು. ನಾಲ್ಕು ವರ್ಷಗಳಿಂದ ಹರಕೆ ತೀರಿಸಲಾಗದ ಹಿನ್ನಲೆ
ಇಂದು ನವಚಂಡಿಕಾಯಾಗವನ್ನು ಹೆಚ್ ಡಿಕೆ ನಡೆಸಿದರು.
ಪತ್ನಿ, ಮಗ, ಸೊಸೆ ಜೊತೆ ಕೊಲ್ಲೂರು ದೇವಾಲಯದಲ್ಲಿ ವಿಶೇಷ ಪೂಜೆ ಯಾಗ ನಡೆಸಿದರು. ಕೊಲ್ಲೂರು ಬಳಿಕ ಕಾಪು ಹೊಸ ಮಾರಿಗುಡಿಗೆ ಹೆಚ್ ಡಿಕೆ ಭೇಟಿ ನೀಡಿದರು. ಕಾಪು ಹೊಸ ಮಾರಿಗುಡಿ ದೇವಿ ಸನ್ನಿಧಾನದಕ್ಕೆ ಹೆಚ್ ಡಿ ಕುಮಾರಸ್ವಾಮಿ ಕುಟುಂಬ ಭೇಟಿ ನೀಡಲಿದ್ದಾರೆ.

