ಉಡುಪಿ : ಕಂಬಳ ವಿವಾದ ವಿಚಾರವಾಗಿ ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಜಿಲ್ಲಾಡಳಿತದೊಂದಿಗೆ ಚರ್ಚೆ ಮಾಡಿ ದಿನ ನಿಗದಿ ಮಾಡಿದ್ದಾರೆ. ಸ್ವಂತ ಹಣವನ್ನು ಖರ್ಚು ಮಾಡಿ ಕಂಬಳ ಮಾಡುತ್ತಿದ್ದಾರೆ. ವಿನಾಕಾರಣ ರಾಜಕಾರಣ ಬೆರಿಸಲಾಗಿದೆ. ಕಾಂಗ್ರೆಸ್ ಮತ್ತು ಮಾಜಿ ಸಚಿವರು ಈ ಕೆಲಸ ಮಾಡಿದ್ದಾರೆ. ಕಂಬಳದಲ್ಲಿ ಪಕ್ಷಭೇದ ಮರೆತು ಎಲ್ಲರೂ ಕೆಲಸ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಜಿಲ್ಲಾ ಆಡಳಿತದ ಈ ನಡೆ ಸರಿ ಅಲ್ಲ. ದಾನಿಗಳ ಸಹಕಾರದೊಂದಿಗೆ ಕಂಬಳ ನಡೆಸಲಾಗುತ್ತದೆ. ಜಿಲ್ಲಾಡಳಿತ ಮತ್ತೊಂದು ಗುದ್ದಲಿ ಪೂಜೆ ಮಾಡಲು ಹೊರಟಿದೆ. ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆಯಾರ ಮಾತನ್ನು ಯಾರು ಕೂಡ ಕೇಳುತ್ತಿಲ್ಲ. ವಿಎ ಯಿಂದ ಚೀಫ್ ಸೆಕ್ರೆಟರಿ ತನಕ ಇದೇ ಪರಿಸ್ಥಿತಿ ಇದೆ ಎಂದರು.
ವಿರೋಧ ಪಕ್ಷದ ಶಾಸಕರನ್ನು ಎಲ್ಲಾ ದಿಕ್ಕಿನಿಂದ ಸದೆಬಡಿಯಲಾಗುತ್ತಿದೆ. ಅಧಿಕಾರಿಗಳನ್ನು ಬಳಸಿಕೊಂಡು ಈ ರೀತಿ ಮಾಡಲಾಗುತ್ತದೆ. ಇಡೀ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಅನುದಾನ ಕೊಡದೆ ಸತಾಯಿಸಲಾಗುತ್ತಿದೆ. ಪ್ರೋಟೋಕಾಲ್ ಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಅನಗತ್ಯ ಕೇಸುಗಳನ್ನು ಹಾಕಲಾಗುತ್ತಿದೆ. ಸಂವಿಧಾನದ ಬಗ್ಗೆ ಭಾಷಣ ಮಾಡುವವರೇ ಉಲ್ಲಂಘನೆ ಮಾಡುತ್ತಿದ್ದಾರೆ ಎಂದರು.

