ಉಡುಪಿ: ಹೊಡೆಯ ಕಡಲ ಕಿನಾರೆ ಸಮೀಪವಿರುವ ಖಾಸಗಿ ಗೆಸ್ಟ್ ಹೌಸ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.
ಎಸಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗೆಸ್ಟ್ ಹೌಸ್ ಒಳಗಿನ ಕೆಲವೊಂದು ವಸ್ತುಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೆಸ್ಟ್ ಹೌಸ್ ನಲ್ಲಿದ್ದ ಅತಿಥಿಗಳು ಸುತ್ತಾಡಲು ಹೊರ ಹೋಗಿದ್ದ ಕಾರಣ ಪ್ರಾಣಾಪಯದಿಂದ ಪಾರಾಗಿದ್ದಾರೆ. ಅವಘಡದಲ್ಲಿ ಎಸಿ ಸಂಪೂರ್ಣವಾಗಿ ಭಸ್ಮವಾಗಿದೆ. ಗೆಸ್ಟ್ ಹೌಸ್ ಒಳಗೆ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

