ಉಡುಪಿ: “ಸಮಾಧಾನ ಮಹೋತ್ಸವ” ನಡೆಸಲು ಅವಕಾಶ ನೀಡಿದರೆ ತೀವ್ರ ಹೋರಾಟನ ನಡೆಸಲಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆಯನ್ನು ನೀಡಿದೆ.

ಮಾ. 20-22ರವೆಗೆ ಉಡುಪಿ ಮಿಷನ್ ಕಾಂಪೌಂಡ್ ಪರಿಸರದಲ್ಲಿ ಮಹೋತ್ಸವ ಆಯೋಜಿಸಲು ಉದ್ಧೇಶಿಸಿದ್ದು, ಹಿಂದೂ ವಿರೋಧಿ ಮೋಹನ್ ಸಿ. ಲಾಝರಸ್ ಉಡುಪಿ ಜಿಲ್ಲಾ ಪ್ರವೇಶಕ್ಕೆ ಅವಕಾಶ ನೀಡಬಾರದು. ಉಡುಪಿಯಲ್ಲಿ ಧಾರ್ಮಿಕ ಅಶಾಂತಿ ಮೂಡಿಸಲು ಪ್ರಯತ್ನಿಸಿದರೆ ಹಿಂಜಾವೇ ಸುಮ್ಮನೆ ಕೂರಲ್ಲ, ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ ನೀಡಿದರು.

View this post on Instagram

A post shared by News Karnataka (@newskarnataka)