ಉಡುಪಿ: ಗ್ಯಾಸ್ ಅಭಾವವನ್ನೇ ಸೈಬರ್ ವಂಚಕರು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಉಡುಪಿ ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗ್ಯಾಸ್ ಬುಕ್ಕಿಂಗ್ ಅಥವಾ ಗ್ಯಾಸ್ ಸಿಲಿಂಡರ್ ಕೆವೈಸಿ ಅಪ್ಡೇಟ್ ಹೆಸರಲ್ಲಿ ಸೈಬರ್ ವಂಚನೆ ನಡೆಯುತ್ತಿದೆ. ಅಪರಿಚಿತರು ಕಳಿಸುವ ಲಿಂಕ್ , ಎಪಿಕೆ ಫೈಲ್ ಓಪನ್ ಮಾಡಿ ಮೋಸ ಹೋಗಬೇಡಿ. ಈಗಾಗಲೇ ಉಡುಪಿಯ ಇಬ್ವರು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ಜಾಗರೂಕರಾಗಿರಿ – ಎಸ್ಪಿ ಹರಿರಾಂ ಶಂಕರ್ ಮನವಿ ಮಾಡಿಕೊಂಡಿದ್ದಾರೆ.

