ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಅವರ ನಿಗೂಢ ಸಾವು ಈಗ ಕರಾವಳಿಯಾದ್ಯಂತ ಭಾರಿ ಚರ್ಚೆಗೆ ಮತ್ತು ಹಲವು ಸಂಶಯಗಳಿಗೆ ಕಾರಣವಾಗಿದೆ. ಕಳೆದ ಒಂದು ವರ್ಷದಿಂದ ಸೋಶಿಯಲ್ ಮೀಡಿಯಾ ಮೂಲಕ ಪ್ರೀತಿಸಿ, ಎರಡೂ ಕುಟುಂಬಗಳನ್ನು ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದ ಸುದೀಪ್ ಮತ್ತು ಕಾರ್ಕಳದ ಮೇಕಪ್ ಆರ್ಟಿಸ್ಟ್ ಸೌಮ್ಯ ಶೆಟ್ಟಿ ಅವರ ಜೀವನದಲ್ಲಿ ಒಂದೇ ತಿಂಗಳೊಳಗೆ ಬಿರುಗಾಳಿ ಎದ್ದಿದೆ.

ಸುದೀಪ್ ಅವರು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನಗಳ ಹಿಂದೆ ಸಾನ್ನಪ್ಪಿದ್ದಾರೆ. ಆದರೆ ಈ ಸಾನ ಸುತ್ತ ಈಗ ಮಾವ ಮತ್ತು ಸೊಸೆಯ ನಡುವೆ ಆರೋಪ ಪ್ರತ್ಯಾರೋಪಗಳ ಯುದ್ಧವೇ ಶುರುವಾಗಿದೆ. ಸೌಮ್ಯ ಅವರ ಪ್ರಚೋದನೆಯೇ ಮಗನ ಸಾವಿಗೆ ಕಾರಣ ಎಂದು ಸುದೀಪ್ ತಂದೆ ದೂರು ದಾಖಲಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸೌಮ್ಯ ಶೆಟ್ಟಿ, ತಮ್ಮ ಸಂಸಾರದಲ್ಲಿ ಅತ್ತೆ-ಮಾವನ ಹಸ್ತಕ್ಷೇಪವಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಮದುವೆಯಾದ ಮೇಲೆ ಸುದೀಪ್ ಮನೆಯವರು ನಮ್ಮನ್ನು ದೂರವಿಟ್ಟಿದ್ದರು. ಸುದೀಪ್ ಅವರ ಮೇಲೆ ಸಾಲದ ಹೊರೆಯೂ ಇತ್ತು. ಅವರು ನನ್ನ ಮನೆಯಲ್ಲಿದ್ದಾಗ ಖುಷಿಯಾಗಿಯೇ ಇದ್ದರು, ಆದರೆ ತಂದೆಯ ಮನೆಗೆ ಹೋದ ಬಳಿಕವೇ ವಿಷ ಸೇಸಿದ್ದಾರೆ. ನನ್ನ ಗಮನಕ್ಕೆ ತರದೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ ನಂತರವೇ ಸಾವು ಸಂಭವಿಸಿದೆ” ಎಂದು ಸೌಮ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರೀತಿ-ಪ್ರೇಮ ಎಂದು ಒಂದಾದ ಈ ಜೋಡಿಯ ಸುಂದರ ಬದುಕು ಮಸಣ ಸೇರಿದ ಇತಿಹಾಸವೇನು? ಸಾಲದ ಬಾಧೆಯೇ ಅಥವಾ ಕೌಟುಂಬಿಕ ಕಲಹವೇ? ಈ ನಿಗೂಢ ಸಾವಿನ ಅಸಲಿ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.

View this post on Instagram

A post shared by News Karnataka (@newskarnataka)