ಉಡುಪಿ: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಪ್ರಚೋದನೆ ಕೇಸ್ ನ್ನು ತಂದೆ ದಾಮೋದರ ಶೆಟ್ಟಿ ದಾಖಲಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನಲೆ ಕಾರ್ಕಳದಲ್ಲಿ ಪತ್ನಿ ಸೌಮ್ಯ ಶೆಟ್ಟಿ ಅರೆಸ್ಟ್ ಮಾಡಲಾಗಿದೆ.

ಆರೋಪಿ ಸೌಮ್ಯ ಶೆಟ್ಟಿಗೆ 14ದಿನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಪ್ರೀತಿಸಿ ಫೆ17ರಂದು ಮದುವೆಯಾಗಿದ್ದ ಕಾರ್ಕಳದ ಸೌಮ್ಯ ಶೆಟ್ಟಿ, ದ.ಕ ಜಿಲ್ಲೆ ನೆಲ್ಯಾಡಿಯ ಸುದೀಪ್ ರೈ ಮದುವೆಯಾದ ಬಳಿಕ ಕಾರ್ಕಳದ ಬಂಗ್ಲೆಗುಡ್ಡೆಯ ಪತ್ನಿ ಮನೆಯಲ್ಲೇ ಸುದೀಪ್ ರೈ ಇದ್ದರು.

ಮಾ17ರಂದು ತಾಯಿ ಜೊತೆ ನೆಲ್ಯಾಡಿ ಭಾಗದಲ್ಲಿ ಕಾರಿನಲ್ಲಿ ಸುದೀಪ್ ರೈ ತೆರಳುತ್ತಿದ್ದರು. ಸುದೀಪ್ ಕಾರಿಗೆ ಅಡ್ಡಗಟ್ಟಿದ್ದ ಸೌಮ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಳೆಂದು ಅತ್ತೆ-ಮಾವ ಆರೋಪ ಮಾಡಿದ್ದಾರೆ. ಆ ಬಳಿಕ ಮಾ.22ರಂದು ಸುದೀಪ್ ವಿಷ ಪದಾರ್ಥ ಸೇವಿಸಿರುವುದಾಗಿ ಸೌಮ್ಯ ಸಂಬಂಧಿಕರಿಗೆ ಕರೆ ಮಾಡಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾ.29ಕ್ಕೆ ಸುದೀಪ್ ರೈ ಮೃತಪಟ್ಟಿದ್ದರು. ಪತ್ನಿ ಸೌಮ್ಯ ಶೆಟ್ಟಿ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದೇ ಕಾರಣ ಎಂದು ಮಾವ ದಾಮೋದರ ಶೆಟ್ಟಿ ದೂರು ದಾಖಲಿಸಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ತನಿಖೆ ನಡೆಸಿದ್ದರು.ಪ್ರಾಥಮಿಕ ತನಿಖೆ ನಡೆಸಿ ಸಾಕ್ಷ್ಯ ಪುರಾವೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆಯಲ್ಲಿ ಪತ್ನಿ ಸೌಮ್ಯ ಶೆಟ್ಟಿ ಆರೋಪ ಸಾಬೀತಾಗಿದೆ.

View this post on Instagram

A post shared by News Karnataka (@newskarnataka)