ಉಡುಪಿ: ಕಾಂತಾರ ಚಲನಚಿತ್ರ ಬಿಡುಗಡೆಯಾದ ನಂತರ ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಾ ಬಂದಿರುವ ದೈವದ ಕೋಲಗಳಿಗೆ ಹೊಸ ಆಯಾಮ ದೊರಕಿದೆ. ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಜನ ದೈವದ ಕೋಲ ನೋಡಲು ಬರುತ್ತಿದ್ದಾರೆ.

ಬಹುತೇಕ ಮಂದಿ, ಈ ದೈವದ ಆರಾಧನೆಯನ್ನು “ಕಾಂತಾರ” ಅಂತಲೇ ಕರೆಯಲು ಪ್ರಾರಂಭಿಸಿದ್ದಾರೆ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಟ್ಟು ಗ್ರಾಮದಲ್ಲಿ ನಡೆಯುತ್ತಿದ್ದ ದೈವದ ಆರಾಧನೆ ವೇಳೆ ವಿದೇಶಿಯರು ಬಂದಿದ್ದಾರೆ. ಕುತೂಹಲದಿಂದ ದೈವರಾದನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಸಾಮಾನ್ಯ ಭಕ್ತರಂತೆ ಊರವರೊಂದಿಗೆ ಬೆರೆತು ತಾವು ಕೂಡ ಆರಾಧನೆಯ ಭಾಗವಾಗಿದ್ದಾರೆ.

ದೈವದ ದರ್ಶನದ ವೇಳೆ ಹೂವನ್ನು ಹಾಕಿ ಖುಷಿಪಟ್ಟಿದ್ದಾರೆ. ಕಾಪು ತಾಲೂಕಿನ ಮಟ್ಟು ಗ್ರಾಮದಲ್ಲಿ, ತಲೆತಲಾಂತರದಿಂದ ನಡೆದು ಬಂದಿರುವ ಪಂಚ ಧೂಮಾವತಿ ಬಂಟ, ವರ್ತೆ ಪಂಜುರ್ಲಿ ಹಾಗೂ ಪರಿವಾರದ ದೈವಗಳ ನೇಮೋತ್ಸವ ಈ ಮೂಲಕ ಗಮನ ಸೆಳೆದಿದೆ.