ಮಂಗಳೂರು : ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಎಫ್‌ಎಂಸಿಐ ಪದವಿ ಪ್ರಧಾನ 2026 ಕಾರ್ಯಕ್ರಮ ಏಪ್ರಿಲ್ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ ನಿರ್ದೇಶಕರಾದ ಫಾ. ಫೌಸ್ಟಿನ್ ಲೂಕಾಸ್ ಲೋಬೋ ತಿಳಿಸಿದ್ದಾರೆ.

ಈ ಕುರಿತು ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಸಮಾರಂಭದಲ್ಲಿ ಒಟ್ಟು 856 ವಿದ್ಯಾರ್ಥಿಗಳು ಆರೋಗ್ಯ ಸೇವೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗ್ರಾಜುಯೇಷನ್ ದಿನಾಚರಣೆ ಕೇವಲ ಪದವಿ ಪ್ರದಾನ ಸಮಾರಂಭವಲ್ಲ, ಸಂಸ್ಥೆಯ ಶೈಕ್ಷಣಿಕ ಮೇಲುಗೈ ಮತ್ತು ಮೌಲ್ಯಾಧಾರಿತ ಶಿಕ್ಷಣದ ಪ್ರತೀಕವಾಗಿದೆ.

ಏಪ್ರಿಲ್ 16ರಂದು ಹೋಮಿಯೋಪಥಿ ಮೆಡಿಕಲ್ ಕಾಲೇಜಿನ 36ನೇ ಪದವಿ ಪ್ರದಾನ ಸಮಾರಂಭ ನಡೆಯಲಿದ್ದು, 111 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಏಪ್ರಿಲ್ 17ರಂದು ಮೆಡಿಕಲ್, ಅಲೈಡ್ ಹೆಲ್ತ್ ಮತ್ತು ಫಿಸಿಯೋಥೆರಪಿ ವಿಭಾಗಗಳ 518 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಏಪ್ರಿಲ್ 18ರಂದು ನರ್ಸಿಂಗ್ ಮತ್ತು ಸ್ಪೀಚ್ & ಹಿಯರಿಂಗ್ ವಿಭಾಗಗಳ 177 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಎಲ್ಲಾ ಸಮಾರಂಭಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೆಸಿಡೆಂಟ್ ಗೋಲ್ಡ್ ಮೆಡಲ್ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಏಪ್ರಿಲ್ 16ರಂದು ಸಂತ ಜೋಸೆಫ್ ಚಾಪೆಲ್‌ನಲ್ಲಿ ಧನ್ಯವಾದ ಅರ್ಪಣಾ ಬಲಿಪೂಜೆ ನಡೆಯಲಿದ್ದು, ಮಂಗಳೂರು ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾಲ್ ಸಾಲ್ದಾನ ಅವರು ಪ್ರಧಾನ ಆಚರಣೆ ನೆರವೇರಿಸಲಿದ್ದಾರೆ.

ಸಮಾರಂಭಕ್ಕೆ ಗಣ್ಯ ಅತಿಥಿಗಳು, ಶಿಕ್ಷಣ ತಜ್ಞರು ಮತ್ತು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಈ ಸಂದರ್ಭ ಎಫ್‌ಎಂಎಂಸಿ,ಎಫ್‌ಎಂಸಿಒಎಎಚ್‌ಎಸ್ & ಎಫ್‌ಎಂಸಿಒಪಿ ಆಡಳಿತಾಧಿಕಾರಿ ಡಾ. ಮೈಕೆಲ್ ಸಂತುಮಯಾರ್, ಎಫ್‌ಎಂಎಚ್‌ಟಿ, ಎಫ್‌ಎಂಎನ್‌ಸಿ & ಎಫ್‌ಎಂಎಎಚ್‌ಎಸ್‌ಸಿ ಆಡಳಿತಾಧಿಕಾರಿ ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ಎಫ್‌ಎಂಎಚ್‌ಪಿಡಿ, ದೇರಳಕಟ್ಟೆ ಆಡಳಿತಾಧಿಕಾರಿ ಫಾ. ನೆಲ್ಸನ್ ಧೀರಜ್ ಪೈಸ್, ಎಫ್‌ಎಂಎಚ್‌ಎಂಸಿ & ಎಚ್ಆಡಳಿತಾಧಿಕಾರಿ.

ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಎಫ್‌ಎಂಎಂಸಿ ಡೀನ್ ಡಾ. ಆಂಟನಿ ಸಿಲ್ವನ್ ಡಿ’ಸೋಜಾ, ಎಫ್‌ಎಂಸಿಒಎಎಚ್‌ಎಸ್ ಪ್ರಾಂಶುಪಾಲರು ಡಾ. ಶಿವಶಂಕರ ಎ.ಆರ್. , ಎಫ್‌ಎಂಸಿಒಪಿ ಪ್ರಾಂಶುಪಾಲರು ಪ್ರೊ. ಚೆರಿಷ್ಮಾ ಡಿ’ಸಿಲ್ವಾ, ಎಫ್‌ಎಂಕಾನ್ & ಎಫ್‌ಎಂಸನ್ ಪ್ರಾಂಶುಪಾಲರು ಸಿಸ್ಟರ್ ಧನ್ಯ ದೇವಾಸಿಯಾ, ಸ್ಪೀಚ್ & ಹಿಯರಿಂಗ್ ಕಾಲೇಜು ಪ್ರಾಂಶುಪಾಲರು ಪ್ರೊ. ಸಿಂಥಿಯಾ ಸಂತಮಯೋರ್, ಎಫ್‌ಎಂಎಚ್‌ಎಂಸಿ, ದೇರಳಕಟ್ ಪ್ರಾಂಶುಪಾಲರು ಡಾ. ಇಎಸ್‌ಜೆ ಪ್ರಭು ಕಿರಣ್, ಎಫ್‌ಎಂಸಿಒಪಿಎಸ್, ದೇರಳಕಟ್ ಪ್ರಾಂಶುಪಾಲರು ಡಾ. ಸತೀಶ್ ಎಸ್., ಡಾ. ಪಾಲಿನ್ ಆನಂದ್, ಎಫ್‌ಎಂಸಿಐ ಲೈಸನ್ ಅಧಿಕಾರಿ ಡಾ. ಕೆಲ್ವಿನ್ ಪೀಟರ್ ಪೈಸ್ ಮತ್ತಿತರರು ಉಪಸ್ಥಿತರಿದ್ದರು.